ಅರ್ಹತಾ ದಿನದಿಂದಲೇ ಪ್ರಾಧ್ಯಾಪಕರಿಗೆ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

5:34 PM, Monday, March 11th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಸಹ ಪ್ರಾಧ್ಯಾಪಕರಾಗಿ ಸೇವಾ ಪದೋನ್ನತಿಯನ್ನು ಹೊಂದಿದ ಸಹಾಯಕ ಪ್ರಾಧ್ಯಾಪಕರಿಗೆ ಅವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ವನ್ನು ನೀಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯು (KAT) ಆದೇಶವನ್ನು ನೀಡಿದೆ. ಇದು ಸ್ವಾಗತಾರ್ಹವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಪ್ರಾಧ್ಯಾಪಕರಿಗೆ ಅವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯವನ್ನು ನೀಡಲು ಸೂಕ್ತ ಕ್ರಮ ಇಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ರಾಜ್ಯ ಸರಕಾರವನ್ನು ಆಗ್ರಹ ಪಡಿಸಿದ್ದಾರೆ.

ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನೀಡಿರುವ ಈ ತೀರ್ಮಾನವು ಅತ್ಯಂತ ಸಮಂಜಸವಾಗಿದೆ. ಇದು ಸಹಜ ನ್ಯಾಯದ ತತ್ವವನ್ನು ಪಾಲಿಸುತ್ತದೆ.

ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ವೃತ್ತಿ ಪ್ರಗತಿ ಯೋಜನೆ ( Carrier Advancement Scheme ) ನ ನಿಯಮಾವಳಿಯ ಅನುಸಾರ ಅರ್ಹತೆಯನ್ನು ಹೊಂದಿರುವ ಸರ್ಕಾರಿ ಕಾಲೇಜುಗಳು ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾದ್ಯಾಪಕರು, ದೈಹಿಕ ಶಿಕ್ಷಣ ನಿರ್ದೇಶಕರು, ಗ್ರಂಥಪಾಲಕರು ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಯ ನಿಯಮಾವಳಿಯಂತೆ ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲಾ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ಅರ್ಹ ಪ್ರಾಧ್ಯಾಪಕರುಗಳಿಗೆ ಇದು ಅನ್ವಯವಾಗುತ್ತದೆ. ಆದುದರಿಂದ ಇಂತಹ ಅರ್ಹ ಪ್ರಾಧ್ಯಾಪಕರುಗಳಿಗೆ ಅವರು ಅರ್ಹತೆ ಹೊಂದಿದ ದಿನಾಂಕದಿಂದಲೇ ಆರ್ಥಿಕ ಸೌಲಭ್ಯಗಳನ್ನು ನೀಡಲು ಸೂಕ್ತ ಕ್ರಮವಿಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನವನ್ನು ನೀಡಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English