ಬೆಳ್ತಂಗಡಿ : ಹಿರಿಯ ಸಾಹಿತಿ, ಪತ್ರಕರ್ತ ನಾಗರಾಜ ಪೂವಣಿ(ನಾ.ವುಜಿರೆ) (86) ಸೋಮವಾರ ಬೆಳಿಗ್ಗೆ ಉಜಿರೆಯ ತನ್ನ ಸ್ವ ಗೃಹ ದಲ್ಲಿ ನಿಧನರಾಗಿದ್ದಾರೆ.
ಹಲವು ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಉದಯವಾಣಿ ಪತ್ರಿಕೆಯ ವರದಿಗಾರನಾಗಿ ಕೆಲಸ ನಿರ್ವಹಿಸಿದ ಇವರು ಸಾಹಿತ್ಯ ಲೋಕದಲ್ಲಿ ನಾ.ವುಜಿರೆ ಎಂದೇ ಖ್ಯಾತಿ ಪಡೆದಿದ್ದರು.
ಸಾಹಿತಿಯಾಗಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ನಾ.ವುಜಿರೆ ಅವರು ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. .ಅಲ್ಲದೇ ಇವರು ಶಿಕ್ಷಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಅವರ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಕೂಡಾ ಅವರು ಪಡೆದುಕೊಂಡಿದ್ದರು. ಮೃತರ ಮನೆಗೆ ಗಣ್ಯರು ಭೇಟಿ ನೀಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಾ.ವುಜಿರೆ ಪತ್ನಿ ಸರಸ್ವತಿ ಎನ್. ರಾಜ್ ಮತ್ತು ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ಮಗ ಪಾರ್ಶ್ವನಾಥ್ ಅವರನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English