40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಕೋರ್ಟ್ ಪಾರ್ಕ್ ಉದ್ಘಾಟನೆ

5:04 PM, Wednesday, March 13th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಬಂಗ್ರಕೂಳೂರು ವಾರ್ಡ್‍ಗೆ ಒಳಪಟ್ಟ ಮಾಲಾಡಿಕೋರ್ಟ್ ಬಡಾವಣೆಯಲ್ಲಿ ನಿರ್ಮಾಣ ಗೊಂಡ ಪಾರ್ಕ್‍ನ ಉದ್ಘಾಟನೆ ಬುಧವಾರ ನಡೆಯಿತು.

ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಅನುದಾನ ಅಂದಾಜು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಹಿಂದಿನ ನನ್ನ ಶಾಸಕ ಅವ„ಯಲ್ಲಿ ಇದಕ್ಕೆ ಮುಡಾದ ವತಿಯಿಂದ ಅನುದಾನ ಮೀಸಲಿಡಲಾಗಿತ್ತು.ಅನೇಕ ಕಿರು ಪಾರ್ಕ್‍ಗಳನ್ನು ನಿರ್ಮಿಸಿ ಹಸಿರು ವಾತಾವರಣ ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ ಕಾಮಗಾರಿಗಳು ನಡೆದಿವೆ ಎಂದರು.

ಕೊಟ್ಟಾರಚೌಕಿಯಲ್ಲಿ ಪಾರ್ಕ್ ನಿರ್ಮಾಣ ಸಹಿತ ಕಾಮಗಾರಿ ಮುಂದುವರಿಯಲಿದೆ. ನಿರ್ವಹಣೆಗೆ ಖಾಸಗೀ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ ಎಂದರು.

ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, 23 ಸೆಂಟ್ ಸರಕಾರಿ ಜಾಗ ಉಪಯೋಗವಾಗದೆ ಗಿಡಗಂಟಿ ಬೆಳೆದು ಹೆಬ್ಬಾವು, ಹಾವು ಮತ್ತಿತರ ಅಪಾಯಕಾರಿ ಸರೀಸೃಪಗಳ ನೆಲೆಯಾಗಿತ್ತು.

ಬಡವಾಣೆ ನಿವಾಸಿಗಳು ಈ ಬಗ್ಗೆ ಆತಂಕ ವ್ಯಕ್ತ ಪಡಿಸಿ ಮನವಿ ಅರ್ಪಿಸಿದ ಮೇರೆಗೆ ಶಾಸಕರು ಅನುದಾನ ನೀಡಿ ಪಾರ್ಕ್ ಇದೀಗ ನಿರ್ಮಿಸಲಾಗಿದೆ. ಸಮೀಪದಲ್ಲೇ ಎಂಸಿಎಫ್ ವತಿಯಿಂದ 25 ಲಕ್ಷ ರೂ.ಅನುದಾನದಲ್ಲಿ ಅಂಗನವಾಗಿ ನಿರ್ಮಾಣವಾಗುತ್ತದೆ. ಬಡಾವಣೆ ನಿವಾಸಿಗಳ ಸಮಿತಿ ರಚಿಸಿ ಈ ಪಾರ್ಕ್ ನಿರ್ವಹಣೆ,ಸ್ವಚ್ಚತೆ ಕಾಪಾಡಿಕೊಳ್ಳಲು ಸೂಚಿಸಲಾಗಿದ್ದು ಒಪ್ಪಿಗೆ ಸೂಚಿಸಿದ್ದಾರೆ .ಇದೊಂದು ಉತ್ತಮ ಕೆಲಸ ಎಂದರು.ಮುಡಾ ಕಮೀಷನರ್ ,ಎಂಜಿನಿಯರ್ , ಬಿಜೆಪಿ ಮುಖಂಡ ಉಮೇಶ್ ಮಲರಾಯ ಸಾನ, ಜಯಪ್ರಕಾಶ್ ಕುಲಾಲ್, ಗುತ್ತಿಗೆದಾರ ಅಜಿತ್ ಅಡ್ಯಾರ್,ಬಡಾವಣೆ ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English