ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿ.ಎಸ್ ಯಡಿಯೂರಪ್ಪ ಭೇಟಿ ಆದ ಶೋಭಾ

12:37 PM, Thursday, March 14th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕೇಂದ್ರಸ ಚಿವೆ ಶೋಭಾ ಕರಂದ್ಲಾಜೆಯವರು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸ ನನಗೆ ಇತ್ತು. ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಭಿವೃದ್ಧಿ ಆಗಿತ್ತು. ಆದರೆ ಕೆಲವರು ಸಹಿಸಲಿಲ್ಲ. ಪ್ರಾಯೋಜಿತ ಪ್ರತಿಭಟನೆಗಳು ನಡೆದವು. ತಮಗೆ ಟಿಕೆಟ್ ಬೇಕು ಎಂದು ಕೆಲವರು ಮಾಡಿಸಿದರು, ಅವರು ಯಶಸ್ವಿ ಆಗಲಿಲ್ಲ. ಅವರು ಟಿಕೆಟ್ ತೆಗೆದುಕೊಳ್ಳಲು ಆಗಲಿಲ್ಲ. ರಾಷ್ಟ್ರೀಯ ನಾಯಕರು ಅದನ್ನ ಪರಿಗಣಿಸಲ್ಲ ಎಂದು ಹೇಳಿದರು.

ಉಡುಪಿ- ಚಿಕ್ಕಮಗಳೂರಲ್ಲಿ ಬಹಳ ದೊಡ್ಡ ಅಭಿವೃದ್ಧಿ ಕೆಲಸ ಆಗಿದೆ. ಆದರೆ ಅದನ್ನು ಪರಿಗಣಿಸದೇ ಕೆಲವರು ವಿರೋಧ ಮಾಡಿದ್ದರು. ಕೇವಲ ಪ್ರಾಯೋಜಿತ ಗುಂಪು ತಮಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಏನೇನೋ ಮಾಡಿತ್ತು. ಆದರೆ ಅವರು ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋಕೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ ಎಂದು ನನ್ನಿಂದ ಸಾಬೀತಾಗಿದೆ. ಇನ್ನಾದ್ರು ಇವರು ಪಾಠ ಕಲಿಯಲಿ, ಬಿಜೆಪಿ ಒಂದು ಶಿಸ್ತಿನ ಪಕ್ಷ. ಈ ರೀತಿಯ ಪಕ್ಷಕ್ಕೆ ಅವಮಾನ ಮಾಡಿದರೆ ಮಣೆ ಹಾಕಲ್ಲ ಅಂತಾ ವರಿಷ್ಠರು ತೋರಿಸಿಕೊಟಿದ್ದಾರೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ, ನಾನು ಬೆಂಗಳೂರಲ್ಲಿ ಶಾಸಕರಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನಾನು ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ ಎಂದು ಶೋಭಾ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English