ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ 19ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿ ಕರ್ನಾಟಕ ಸರಕಾರದ ಸಚಿವಾಲಯ ಅಧೀನ ಕಾರ್ಯದರ್ಶಿ ಮುಂದಿನ ಮೂರು ವರ್ಷಗಳ ಅವಧಿಗೆ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ಪತ್ರಕರ್ತ ತಾರಾನಾಥ ಗಟ್ಟಿ ಕಾಪಿಕಾಡ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್ ಶೆಟ್ಟಿ, ಶೈಲೇಶ್ ಬಿನ್ ಬೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು ಕಾಪಿಕಾಡ್ ಮತ್ತು ನಾಗೇಶ್ ಕುಮಾರ್ ಉದ್ಯಾವರ ಸದಸ್ಯರಾಗಿದ್ದಾರೆ. ಉಡುಪಿಗೆ ಸಂತೋಷ್ ಶೆಟ್ಟಿ ಸದಸ್ಯರಾಗಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜೋಚಿಮ್ ಸ್ಟ್ಯಾನಿ ಅಲ್ವಾರೆಸ್ ವಹಿಸಿದ್ದಾರೆ. ಸದಸ್ಯರಾದ ಬೆಂಗಳೂರಿಗೆ ಫಾದರ್ ಪ್ರಕಾಶ್ ಮಾಡ್ತಾ ಎಸ್ ಜೆ. ದಕ್ಷಿಣ ಕನ್ನಡಕ್ಕೆ ರೊನಾಲ್ಡ್ ಕ್ರಾಸ್ತಾ, ಡಾ ವಿಜಯಲಕ್ಷ್ಮಿ ನಾಯಕ್, ನವೀನ್ ಲೋಬೋ, ಸಪ್ನಾ ಮೇ ಕ್ರಾಸ್ತಾ ಮತ್ತು ಸಮರ್ಥ ಭಟ್ ಸದಸ್ಯರಾಗಿದ್ದಾರೆ. ಯಲ್ಲಾಪುರಕ್ಕೆ ಸುನೀಲ್ ಸಿದ್ದಿ, ಉತ್ತರ ಕನ್ನಡಕ್ಕೆ ಜೇಮ್ಸ್ ಲೋಪೆಜ್ ಸದಸ್ಯರಾಗಿದ್ದಾರೆ. ಕಾರ್ಕಳಕ್ಕೆ ದಯಾನಂದ ಮುಡ್ಯೇಕರ್, ಚಿಕ್ಕಮಗಳೂರಿಗೆ ಪ್ರಮೋದ್ ಪಿಂಟೋ ಸದ್ಯರಾಗಿ ನೇಮಕಗೊಂಡಿದ್ದಾರೆ.
ಉಮ್ಮರ್ ಯು ಹೆಚ್ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಬ್ಯಾರಿ ಅಕಾಡೆಮಿಯ ಸದಸ್ಯರಾಗಿ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಹಫ್ಸಾ ಬಾನು ಬೆಂಗಳೂರು, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ಯು.ಎಚ್. ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಹಮೀದ್ ಹಸನ್ ಮಾಡೂರು, ಸಮೀರ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ.
Click this button or press Ctrl+G to toggle between Kannada and English