ಮಂಗಳೂರು : ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.
ಬಳಿಕ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನದಲ್ಲಿ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಯು ಯೋಗದ ಬಹುಮುಖ್ಯ ಸಾಧನೆಗಳಲ್ಲಿ ಒಂದು. ವಾಸ್ತವಿಕ ದೃಷ್ಟಿಯಿಂದ ನೋಡಿದಾಗ ದೇಹ ಮನಸ್ಸು ಹಾಗೂ ಭಾವನೆಗಳ ನಡುವೆ ಸಮತೋಲನ ಅಥವಾ ಸಾಮರಸ್ಯ ಸಾಧಿಸುವುದಕ್ಕೆ ಯೋಗವು ಒಂದು ಸಾಧನ. ಇದನ್ನು ಕ್ರಿಯೆಗಳು, ಆಸನ, ಪ್ರಾಣಾಯಾಮ, ಮುದ್ರಾ ಹಾಗೂ ಧ್ಯಾನಗಳ ಮೂಲಕ ಸಾಧಿಸಲಾಗುತ್ತದೆ ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ಹಾಗೂ ಯೋಗದ ನಿಯಮ, ಸೂಚನೆಯನ್ನು ತಿಳಿಸಿದರು. ದೇಲಂಪಾಡಿ ಯೋಗ ಪ್ರತಿಷ್ಠಾನದ ಶಿಷ್ಯರಾದ ಸುಮಾ, ಮೈತ್ರಿಮಲ್ಲಿ, ಚಂದ್ರಹಾಸ ಬಾಳ ಹಾಗೂ ಸುರೇಶ್ ಸಹಕರಿಸಿದರು. ಸುಮಾರು 60ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು. ಈ ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮಠವನ್ನು ಸಂಪರ್ಕಿಸಿರಿ ಎಂದು ಶ್ರೀ ದೇಲಂಪಾಡಿಯವರು ತಿಳಿಸಿದರು.
Click this button or press Ctrl+G to toggle between Kannada and English