ನಟ, ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯಕ್ಕೆ ಬ್ರೇಕ್

11:09 PM, Friday, June 7th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಪರಿಚಯವಾಗಿ , ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರು ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಡಿವೋರ್ಸ್‌ ಬಳಿಕ ಸಾಮಾನ್ಯವಾಗಿ ವಿಚ್ಛೇದನ ಪಡೆದ ಜೋಡಿಗಳು ಒಬ್ಬರ ಮುಖ ಒಬ್ಬರು ನೋಡಲು ಇಷ್ಟಪಡುವುದಿಲ್ಲ. ಆದರೆ ಚಂದನ್‌ ಮತು ನಿವೇದಿತಾ ಅವರು ದಾಂಪತ್ಯಕ್ಕೆ ಖುಷಿಯಲ್ಲೇ ಅಂತ್ಯ ಹಾಡಿ, ಕೈ ಕೈ ಹಿಡಿದು ನ್ಯಾಯಾಲಯದಿಂದ ಹೊರಬಂದಿದ್ದಾರೆ.

ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತು ವಿಚಾರಣೆ ಎದುರಿಸಿ, ಕೈ ಕೈ ಹಿಡಿದು ಕೋರ್ಟ್‌ನಿಂದ ಹೊರಬರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನೂ ನಿವೇದಿತಾ ಹಾಗೂ ಚಂದನ್‌ ಗೌಡ ಅವರು ಬಿಗ್‌ಬಾಸ್‌ ಶೋ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಯಾಗಿ 2019ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್‌ ಪ್ರಪೋಸ್‌ ಮಾಡಿ ಸುದ್ದಿಯಾಗಿದ್ದರು. ಆ ನಂತರ ಕುಟುಂಬದ ಒಪ್ಪಿಗೆ ಮೇರೆಗೆ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾರಾಣಿ ಶೋ ನಲ್ಲೂ ಈ ಜೋಡಿ ಭಾಗವಹಿಸಿ, ಮೋಡಿ ಮಾಡಿತ್ತು.

ಇನ್ನೂ ಈ ಸ್ಟಾರ್‌ ಜೋಡಿ ದೂರವಾಗಲು ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಇಬ್ಬರೂ ಖುಷಿಯಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್‌ ನೀಡಿದ್ದಾರೆ.

ಈ ನಡುವೆ ಸಂಜೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿರುವುದು ನಿಜವಾಗಿದೆ.

ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿ ನಿವೇದಿತಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಡಿವೋರ್ಸ್ ವಿಚಾರ ಅಭಿಮಾನಿಗಳಿಗಂತೂ ಶಾಕ್ ತಂದಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿರುವುದಂತೂ ಸತ್ಯ. ಈ ನಡುವೆ ಡಿವೋರ್ಸ್ ಆದರೂ ಬಲವಾದ ಸ್ನೇಹ ಹಾಗೂ ಗೌರವವನ್ನು ಹೊಂದಿರುವುದಾಗಿ ಇಬ್ಬರೂ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೋರ್ಟ್‌ ನಿಂದ ಇಬ್ಬರೂ ಕೈಕೈ ಹಿಡಿದುಕೊಂಡೇ ತೆರಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English