ಬಸ್ಸಿನಲ್ಲಿ ಯುವತಿಯ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ : ಯುವಕನಿಗೆ ಥಳಿಸಿರುವ ವಿಡಿಯೋ ವೈರಲ್

11:27 PM, Saturday, June 8th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಯುವತಿಯ ಸಂಬಂಧಿಕರು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ ಬಲ್ಲಾಳ್‌ ಬಾಗ್ ಎಂಬಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಮಂಗಳೂರು ನಗರದ ನಾಗೂರಿಯಲ್ಲಿರುವ ಎಸ್​ಕೆ ಗ್ರೂಪ್ ಆಫ್ ಕಂಪನಿಯಲ್ಲಿ ಪ್ರೊಡಕ್ಟ್​ಗಳನ್ನು ಸೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಯುವತಿ ಶುಕ್ರವಾರ (ಜೂ.07) ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೂರಿಯಲ್ಲಿರುವ ಕಚೇರಿಗೆ ಹೋಗಿ ಪ್ರೊಡಕ್ಟ್​ಗಳನ್ನು ತೆಗೆದುಕೊಂಡಿದ್ದಾಳೆ. ಬಳಿಕ ಪ್ರೊಡಕ್ಟ್​ಗಳನ್ನು ಮಾರಾಟ ಮಾಡಲು ನಾಗೂರಿಯಿಂದ ಬಸ್​​ನಲ್ಲಿ ಹೊರಟು 9 ಗಂಟೆ ಸುಮಾರಿಗೆ ಸ್ಟೇಟ್ ಬ್ಯಾಂಕ್​ಗೆ ಬಂದು ಇಳಿದಿದ್ದಾರೆ.

ನಂತರ ಸ್ಟೇಟ್ ಬ್ಯಾಂಕ್​ನಿಂದ ಬಜಪೆ ಕಡೆಗೆ ಹೋಗಲು ಮರೋಳಿ ಎಂಬ ಹೆಸರಿನ ಬಸ್ಸನಲ್ಲಿ 9:10ಕ್ಕೆ ಹತ್ತಿ ನಿರ್ವಾಹಕ ಸೈಡ್​ನ ನಾಲ್ಕನೇ ಸೀಟಿನಲ್ಲಿ ಕುಳಿತುಕೊಂಡಿದ್ದಾಳೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಯುವಕ, ಯುವತಿ ಕೂತಿದ್ದ ಕುಳಿತುಕೊಂಡಿದ್ದ ಹಿಂಬದಿಯ ಸೀಟಿನಲ್ಲಿ ಕೂರುತ್ತಾನೆ. ಬಳಿಕ ಯುವತಿಯ ಸೊಂಟಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ.

ಬಳಿಕ ಯುವತಿ ಈ ವಿಚಾರವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ವಿಚಾರ ತಿಳಿದು ಯುವತಿ ಸಂಬಂಧಿಕರು ಬಸ್ಸನ್ನು ಬಲ್ಲಾಳ್‌ ಬಾಗ್ ಎಂಬಲ್ಲಿ ತಡೆದಿದ್ದಾರೆ. ಬಳಿಕ ಆತನನ್ನು ಬಸ್​ನಿಂದ ಕೆಳಗಿಳಿಸಿ ವಿಚಾರಿಸಿ, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English