ಪಂಚಾಯತ್ ಕ್ಲರ್ಕ್ ತನ್ನ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ

9:24 PM, Tuesday, April 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಾಸರಗೋಡು : ಪಂಚಾಯತ್ ನ ಕ್ಲರ್ಕ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚೀಮೇನಿ ಸಮೀಪದ ಚೆಂಬ್ರಕಾನ ದಲ್ಲಿ ನಡೆದಿದೆ.

ಚೆಂಬ್ರಕಾನ ದ ರಂಜಿತ್ ರವರ ಪತ್ನಿ ಸಜೀನಾ ( 34) , ಮಕ್ಕಳಾದ ಗೌತಮ್ ( 9) ಮತ್ತು ತೇಜಸ್ ( 6) ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳು ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಸಜೀನಾ ಕೈ ನರ ಕತ್ತರಿಸಿ ಬಳಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ನ ಕ್ಲರ್ಕ್ ಆಗಿದ್ದರು.

ಮಾಹಿತಿ ತಿಳಿದು ಚೀಮೇನಿ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ , ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English