ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ವಂಚನೆ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ

2:31 PM, Tuesday, June 11th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ವಂಚನೆ ಎಸಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

“ವೃಕ್ಷ ಬಿಸಿನೆಸ್ ಸೊಲ್ಯೂಶನ್ ಎಂಬ ಸಂಸ್ಥೆಯು ಮಂಗಳೂರಿನಲ್ಲಿ ಸ್ಥಾಪನೆಯಾಗಿ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದಾದ್ಯಂತ ಹಣ ಸ್ವೀಕೃತಿ ಕೇಂದ್ರಗಳನ್ನು ಪ್ರಾರಂಭಿಸಿ ಕರ್ನಾಟಕ ಮತ್ತು ಕೇರಳದ ಹಲವಾರು ಏಜೆಂಟರನ್ನು ನೇಮಿಸಿ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಸಂಗ್ರಹಿಸಿ 2014ರಲ್ಲಿ ಗ್ರಾಹಕರ ಹಣ ಮರುಪಾವತಿಸದೆ ಮುಚ್ಚಿರುತ್ತದೆ. ಇದನ್ನು ತಿಳಿದು ತುಳುನಾಡ ರಕ್ಷಣಾ ವೇದಿಕೆ ತನ್ನ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಘಟಕದ ವತಿಯಿಂದ ಗ್ರಾಹಕರಿಗೆ ಹಣ ಮರು ಪಾವತಿಸುವಂತೆ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಕಮಿಷನರ್ ರವರಿಗೆ ಮನವಿ ಸಲ್ಲಿಸಿತ್ತು. ಸರಕಾರ ವೃಕ್ಷ ಸಂಸ್ಥೆಯ ಆರೋಪಿಗಳನ್ನು ಬಂಧಿಸಿತ್ತು. ಆದರೂ ಗ್ರಾಹಕರಿಗೆ ಯಾವುದೇ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆಯು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಪರಿಣಾಮ ಸರಕಾರವು ವೃಕ್ಷ ಸಂಸ್ಥೆಯ ಕೇಸನ್ನು ಸಿಒಡಿ ತನಿಖೆಗೆ ಒಪ್ಪಿಸಿತು. ಆದರೆ ಸಿಒಡಿ ಅಧಿಕಾರಿಗಳು ಗ್ರಾಹಕರ ಸಂಬಂಧಪಟ್ಟಮೂಲ ದಾಖಲೆಗಳನ್ನು ತೆಗೆದುಕೊಂಡು ಹೋದರೆ ಹೊರತು ಈ ಸಂಬಂಧ ಗ್ರಾಹಕರಿಗಾಗಲೀ, ದೂರುದಾರ ಸಂಘಟನೆಗಾಗಲೀ ಕಳೆದ 8 ವರ್ಷಗಳಿಂದ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆರೋಪಿಗಳು ಜಾಮೀನಿನ ಮೂಲಕ ಹೊರಗಿದ್ದು ಕೋರ್ಟಿಗೆ ಹಾಜರಾಗುತ್ತಿದ್ದರೂ ಇದುವರೆಗೂ ಗ್ರಾಹಕರಿಗೆ ತನ್ನ ಹೇಳಿಕೆ ಹಾಗೂ ಸಾಕ್ಷ್ಯ ನುಡಿಯಲು ಕೋರ್ಟ್ ಹಾಗೂ ಸರಕಾರದಿಂದ ಅವಕಾಶ ನೀಡಿಲ್ಲ. ವೃಕ್ಷ ಸಂಸ್ಥೆಯು ಈವರೆಗೂ ಏಜೆಂಟರು ಹಾಗೂ ಗ್ರಾಹಕರ ಹಣ ಮರುಪಾವತಿಸಿಲ್ಲ” ಎಂದು ಆರೋಪಿಸಿದರು.

“ಆರ್ ಬಾಲಚಂದರ್ (62) ಎಂಬವರು ಹಿರಿಯ ನಾಗರಿಕ ಹಾಗೂ ಒಂದು ಕಣ್ಣನ್ನು ಕಳೆದುಕೊಂಡ ಅಂಗವಿಕಲರಾಗಿದ್ದು ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಬಲ್ಮಠದ ಲಕ್ಷ್ಮಿ ಟವ‌ನಲ್ಲಿರುವ ಕೆನರಾ ಫಿಶ್ ಆಂಡ್ ಫಾರ್ಮರ್ ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ, ಆಡಳಿತ ನಿರ್ದೇಶಕರಾಗಿರುವಂತಹ 1) ಸಿಂಧು ಚಕ್ರಪಾಣಿ, 2) ಸಿಮಿ ಪಾರುತಿವಲಪ್ಪಿ ಆಲ್‌ಡೂಸ್, 3) ಸಂಗೀತ ಗೋಪಿ, 4) ಅನಿಲ್‌ ಚಕ್ರಪಾಣಿ, 5) ಮನೋಜ್ ಪಿ, 6) ವೆಂಗಣ ಪತೋಡಿ ಹೇಮಂತ್ ಪ್ರದೀಪ್, 7) ಪತಿಯ ವಲಪ್ಪಿಲ್ ಶಾಜಿ, 8) ವಲಿಯಾಲ್ ಚೆರಿಯತ್ ನಿಕಿಲ್, 9) ಅನಿಲ್ ಮೋಹನ್ ರವರುಗಳು ಆಡಳಿತ ನಡೆಸುತ್ತಿದ್ದು ಕಂಪೆನಿಯ ರೀಜಿನಲ್ ಮ್ಯಾನೇಜರ್ ಆಗಿರುವ ಸಂತೋಷ್ ಕುಮಾರ್ ಹಾಗೂ ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಮೂಲೆ ಯವರು ಬಾಲಚಂದರ್‌ರವರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದು ಅದರಂತೆ ಒಟ್ಟು 4 ಲಕ್ಷ ರೂಪಾಯಿಗಳ ಚೆಕ್‌ ಅನ್ನು ಬಾಲಚಂದರ್ ತೆಗೆದುಕೊಂಡಿದ್ದು, ನಮ್ಮ ಸಂಸ್ಥೆಯು ಕೇರಳ, ಕರ್ನಾಟಕ ಸೇರಿದಂತೆ ಶಾಖೆಗಳನ್ನು ಹೊಂದಿದ್ದು, ಉತ್ತಮ ವ್ಯವಹಾರ ಹೊಂದಿರುವುದರಿಂದ ನೀವು ಹೂಡಿದ ಹಣಕ್ಕೆ ಮೋಸವಾಗುವುದಿಲ್ಲ. ನೀವು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆಕಸ್ಮಾತ್‌ ಸಂಸ್ಥೆಯು ಮುಳುಗಿದರೆ ನೀವು ಹೂಡಿರುವ 4 ಲಕ್ಷ ರೂಪಾಯಿಗೆ 50,000/- ರೂಪಾಯಿ ಲಾಭಂಶ ಸೇರಿಸಿ ರೂ. 4,50,000/- ರೂಗಳನ್ನು ಕಂಪೆನಿಯಿಂದ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಹಾಗೂ ಇಷ್ಟು ಲಾಭಾಂಶವನ್ನು ಮಂಗಳೂರಿನಲ್ಲಿ ಯಾವುದೇ ಸಂಸ್ಥೆಯು ನೀಡುವುದಿಲ್ಲ ಎಂದು ಭರವಸೆ ನೀಡಿರುತ್ತಾರೆ. ಬಾಂಡ್ ಕಳೆದ ಕಳೆದ ತಿಂಗಳ 20ನೇ ತಾರೀಖಿಗೆ ಬಾಲಚಂದರ್‌ ರವರು ಹೂಡಿಕೆ ಮಾಡಿದ ಹಣದ ಅವಧಿ ಮುಕ್ತಾಯವಾಗಿದ್ದು, ಅವರು ಹೂಡಿದ ಹಣ ಹಿಂಪಡೆಯಲು ಮಂಗಳೂರಿನ ಬಲ್ಕರದಲ್ಲಿರುವ ಕಛೇರಿಗೆ ತೆರಳಿದಾಗ ಸಂಸ್ಥೆಯು ಬಾಗಿಲು ಮುಚ್ಚಿದ್ದು ಇದರಿಂದ ಅವರಿಗೆ ತೀವ್ರ ಆಘಾತವಾಗಿದೆ. ಅವರು ತಕ್ಷಣ ರವಿಚಂದ್ರನ್ ರವರ ಮೊಬೈಲ್‌ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಅವರು ರೀಜಿನಲ್ ಮ್ಯಾನೇಜರ್ ಸಂತೋಷ್‌ರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಿರುವುದಿಲ್ಲ. ಇಂಥ ಬ್ಲೇಡ್ ಕಂಪೆನಿಗಳು ಕೂಡಲೇ ಗ್ರಾಹಕರ ಹಣ ಹಿಂದಿರುಗಿಸದೆ ಇದ್ದರೆ ಉಗ್ರ ಹೋರಾಟ ನಡೆಸಬೇಕಾದೀತು” ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಶಾಂತ್ ಕಡಬ, ಸಂತ್ರಸ್ತರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English