ಕಾಸರಗೋಡು : ಕುವೈತ್ ನ ಬಹುಮಹಡಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ಅಗ್ನಿ ಅನಾಹುತದಲ್ಲಿ ಕಾಸರಗೋಡು ಮೂಲದ ಇಬ್ಬರು ಸೇರಿ ರಾಜ್ಯದ ಒಟ್ಟು ಹನ್ನೊಂದು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಚೆರ್ಕಳ ಕುಂಡಡ್ಕದ ರಂಜಿತ್ ( 34) ಹಾಗೂ ತೃಕ್ಕರಿಪುರ ಎಳಂಬಚ್ಚಿಯ ಪಿ . ಕುಂಞ ಕೇಳು ( 55) ಮೃತಪಟ್ಟವರು. ರಂಜಿತ್ ಕಳೆದ ಎಂಟು ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದರು. ಒಂದು ವರ್ಷದ ಹಿಂದೆ ಊರಿಗೆ ಬಂದು ಮರಳಿದ್ದರು .
ಚೆರ್ಕಳ – ಕುಂಡಡ್ಕದ ರವೀಂದ್ರ – ರಮಣಿ ದಂಪತಿ ಪುತ್ರ. ಪಿ . ಕುಂಞ ಕೇಳು ಕುವೈತ್ ನ ಎನ್.ಬಿ.ಟಿ.ಸಿ ಕಂಪೆನಿಯ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತದಲ್ಲಿ ಕಾಸರಗೋಡಿನ ಹಲವು ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ದುರಂತದಲ್ಲಿಲ್ಲಿ ಕೇರಳ ಮೂಲದ 11 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English