ಬೆಂಗಳೂರು: ರೇಣುಕಾಸ್ವಾಮಿ ತನ್ನ ಮರ್ಮಾಂಗದ ವಿಡಿಯೋ ಮೆಸೇಜ್ ಮತ್ತು ದರ್ಶನ್ ಗಿಂತ ನಾನೇನು ಕಮ್ಮಿ ಇಲ್ಲ ನನ್ನ ಜೊತೆ ಬಾ ಎಂದು ಪವಿತ್ರಾ ಗೌಡ ಗೆ ಕಳುಹಿಸಿದ್ದ ಎಂದು ಹೇಳಲಾದ ಮೆಸೇಜ್ ದರ್ಶನ್ ಗೆ ಕಳುಹಿಸಿದ್ದು ತಪ್ಪಾಯಿತು ಎಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಒಪ್ಪಿಕೊಂಡಿದ್ದಾರೆ.
ಪವಿತ್ರಾ ಗೌಡಗೆ ಇದೀಗ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಕೈಗೆ ಕೋಳ ಬಿದ್ದ ಮೇಲೆ ಜ್ಞಾನೋದಯವಾಗಿದ್ದು, ಪೊಲೀಸರ ಮುಂದೆ ಪವಿತ್ರಾ ಗೌಡ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಹೇಳಿ ತಪ್ಪು ಮಾಡಿದೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಪವಿತ್ರಗೌಡ ಅಳಲು ತೋಡಿಕೊಂಡಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಹೇಳಿ ತಪ್ಪು ಮಾಡಿದೆ. ದರ್ಶನ್ಗೆ ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿಕೊಂಡೆ. ಅಶ್ಲೀಲ ಮೆಸೇಜ್ ತೋರಿಸಿ ಘಟನೆ ಬಗ್ಗೆ ಹೇಳಿದ್ದೇ ಇಷ್ಟೆಲ್ಲಾ ಆಯ್ತು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.
ಅಶ್ಲೀಲ ಮೆಸೇಜ್ಗಳನ್ನು ದರ್ಶನ್ಗೆ ತೋರಿಸಿ ಹೇಳಬಾರದಿತ್ತು. ಬದಲಾಗಿ ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದೆ ತಪ್ಪಾಯ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
Click this button or press Ctrl+G to toggle between Kannada and English