ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅರೋಗ್ಯ ಅಧಿಕಾರಿ ಶವ ಪತ್ತೆ

5:42 PM, Wednesday, June 19th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಜೇಶ್ವರ : ಎರಡು ತಿಂಗಳ ಹಿಂದೆ ಮಂಜೇಶ್ವರದಲ್ಲಿ ಕರ್ತವ್ಯ ವಹಿಸಿಕೊಂಡಿದ್ದ ಅರೋಗ್ಯ ಅಧಿಕಾರಿಯೋರ್ವರು ತಮ್ಮ ವಾಸಸ್ಥಳದ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.

ಮೃತಪಟ್ಟವರು ಪತ್ತನಂತ್ತಿಟ್ಟದ ಮನೋಜ್ (45). ಅವರು ಮಂಜೇಶ್ವರ ಬ್ಲಾಕ್ ಪಂಚಾಯತ್ ಕುಟುಂಬ ಕಲ್ಯಾಣ ಕೇಂದ್ರದ ಆರೋಗ್ಯಾಧಿಕಾರಿ ಆಗಿದ್ದರು.

ಮಂಜೇಶ್ವರ ಎಸ್ ಐ ಟಿ ಶಾಲಾ ಸಮೀಪದ ವಸತಿ ಗೃಹ ದಲ್ಲಿ ವಾಸವಾಗಿದ್ದರು ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಒಬ್ಬರು ಮಾತ್ರ ಈ ಕೊಠಡಿಯಲ್ಲಿದ್ದರು ಎನ್ನಲಾಗಿದೆ.

ಹೃದಯಘಾತದಿಂದ ಮೃತಪಟ್ಟಿರಹುದು ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English