ಮಂಗಳೂರು: “ಪಿ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ “ಆರಾಟ” ಕನ್ನಡ ಸಿನಿಮಾ ಜೂನ್ 21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ್ ರೈ ಮಲಾರಬೀಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು ಚಿತ್ರದ ಟೀಸರ್, ಟ್ರೈಲರ್ ಹಾಗೂ 2 ಹಾಡುಗಳನ್ನು ಕನ್ನಡದ ಹೆಸರಾಂತ ಯೂಟ್ಯೂಬ್ ಚಾನೆಲ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಳಿಸಲಾಗಿದ್ದು ಈಗಾಗಲೇ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ” ಎಂದರು.
“ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗಗಳಾದ ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸುಮಾರು 20 ದಿನಗಳ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದ್ದು ಪಿ.ಎನ್.ಆರ್ ಬ್ಯಾನರ್ ನ ಅಡಿಯಲ್ಲಿ ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ, ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ” ಎಂದು ನಟ ಜ್ಯೋತಿಷ್ ಶೆಟ್ಟಿ ಹೇಳಿದರು.
ನಾಯಕನಟ ರಂಜನ್ ಕಾಸರಗೋಡು ಮಾತನಾಡಿ, “ಚಿತ್ರದಲ್ಲಿ ಕರಾವಳಿಯ ಸೊಗಡನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ದೇವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಜಳಕದ ಸನ್ನಿವೇಶಕ್ಕೆ ಆರಾಟ ಎಂದು ಕರೆಯಲಾಗುತ್ತಿದ್ದು ಇಡೀ ಸಿನಿಮಾ ತುಳುನಾಡಿನಲ್ಲಿ ಚಿತ್ರಿಸಲಾಗಿದೆ. ಎಲ್ಲರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಘವೇಂದ್ರ ಹೊಳ್ಳ, ಸಂಗೀತ ನಿರ್ದೇಶಕ ಸಮೀರ್ ಮುಡಿಪು, ಸುನಿಲ್ ನೆಲ್ಲಿಗುಡ್ಡೆ, ರಂಜನ್ ಕಾಸರಗೋಡು, ಯೋಗೀಶ್ ಕೆ.ಎನ್., ಜ್ಯೋತಿಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು:
ಸಿನಿಮಾದ ಮೂಲಕಥೆ ರಾಘವೇಂದ್ರ ಹೊಳ್ಳ ಅವರದ್ದಾಗಿದ್ದು ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ಪುಷ್ಪರಾಜ್ ರೈ ಮಲಾರಬೀಡು ವಹಿಸಿದ್ದಾರೆ.
ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆರ್ ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ದುಡಿದಿದ್ದಾರೆ. ಛಾಯಾಗ್ರಹಣ ರವಿ ಸುವರ್ಣ, ಸಂಕಲನ ದಾಮು ಕನ್ಸೂರ್ , ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ಸಾಹಿತ್ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್ An, ಗಾಯಕರು ಶಮೀರ್ ಮುಡಿಪು ಹಾಗೂ ಶಾಲಿನಿ ಎಸ್ ಆರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ ಮಂಗಳೂರು, ಪ್ರಸಾಧನ ಚರಣ್ ರಾಜ್ ಪಚ್ಚಿನಡ್ಕ, ಕಲಾ ವಿನ್ಯಾಸ ಹರೀಶ್ ಆಚಾರ್ಯ, ಸ್ಥಿರ ಚಿತ್ರಣ ನವನೀತ್ ವಿಠ್ಠಲ್, ಪ್ರಚಾರಕಲೆ ಯಶ್ವಿನ್ ಕೆ ಶೆಟ್ಟಿಗಾರ್ ಹಾಗೂ ನಿರ್ಮಾಣ ಮೇಲ್ವಿಚಾರಣೆಯನ್ನು ಭಾಗ್ಯರಾಜ್ ನಾವೂರು ನಿರ್ವಹಿಸಿದ್ದಾರೆ.
ತಾರಾಗಣದಲ್ಲಿ ಸರಕಾರಿ ಹಿ.ಪ್ರಾ ಶಾಲೆ ಖ್ಯಾತಿಯ ದಡ್ಡ ಪ್ರವೀಣ ರಂಜನ್ ಕಾಸರಗೋಡು, ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು , ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ, ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ ಸಂಕೇತ್, ಉದಯ ಶೆಟ್ಟಿ ಇಡ್ಯಾ, ಉತ್ಸವ್ ವಾಮಂಜೂರ್, ತುಳಸೀಧರನ್, ಶಶಿ ಗುಜರನ್ ಪಡುಬಿದ್ರಿ ನಟಿಸಿದ್ದಾರೆ.
Click this button or press Ctrl+G to toggle between Kannada and English