ಭಾರತದ ಸನಾತನ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುವ ದಿನವೇ ಅಂತಾರಾಷ್ಟ್ರೀಯ ಯೋಗ ದಿನ : ವೇದವ್ಯಾಸ ಕಾಮತ್

4:09 PM, Friday, June 21st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪಿವಿಎಸ್ ಸರ್ಕಲ್ ಬಳಿಯ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಭಾರತದ ಸನಾತನ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುವ ದಿನವೇ ಅಂತಾರಾಷ್ಟ್ರೀಯ ಯೋಗ ದಿನ. ಮನುಷ್ಯನ ದೇಹದ ಸಮತೋಲನಕ್ಕಾಗಿ ಯೋಗದ ಕೊಡುಗೆ ಅನನ್ಯವಾಗಿದ್ದು ದೇಹದ ಜೊತೆಗೆ ಮನಸ್ಸಿಗೂ ಅತ್ಯಂತ ಪರಿಣಾಮಕಾರಿಯಾಗಿದೆ. ಇಂತಹ ಯೋಗಾಭ್ಯಾಸವು ನಮ್ಮೆಲ್ಲರ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯವನ್ನು ತರಲಿ ಎಂದು ಹಾರೈಸಿದರು.

ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು ಸಹಿತ ಅನೇಕ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English