ಮಂಗಳೂರು : ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಕಲ್ಲು ಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆಗೆ ನುಗ್ಗಿದ್ದ ದರೋಡೆಕೋರರು ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ಇರಬಹುದು ಎಂಬ ಲೆಕ್ಕ ಹಾಕಿದ್ದ ದರೋಡೆಕೋರರು ಅದನ್ನು ಹೊತ್ತೂಯ್ಯಲು ಗೋಣಿ ಚೀಲ ತಂದಿದ್ದರು ಎಂಬ ಅಂಶ ತಿಳಿದುಬಂದಿದೆ.
ಆದರೆ ದರೋಡೆಕೋರರು ನಿರೀಕ್ಷಿದಷ್ಟು ನಗದು ಹಣ ಸಿಗಲಿಲ್ಲ ಎನ್ನಲಾಗುತ್ತಿದೆ. ಕೃತ್ಯದ ಸಂದರ್ಭದಲ್ಲಿ ಮನೆಯವರನ್ನು ಪದೇ ಪದೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದ್ದು ಯಜಮಾನ ಪದ್ಮನಾಭ ಕೋಟ್ಯಾನ್ ಮೇಲೆ ಅದೇ ಕಾರಣಕ್ಕೆ ಅರ್ಧ ಗಂಟೆ ಕಾಲ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಮನೆಯನ್ನು ಪೂರ್ತಿಯಾಗಿ ಜಾಲಾಡಿದ್ದಾರೆ. ಹಾಸಿಗೆ, ಕಪಾಟಿನ ಅಡಿ ಭಾಗದಲ್ಲಿಯೂ ಹುಡುಕಿದ್ದಾರೆ. ಭಾರೀ ಹಣವನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಮಾಹಿತಿ ಇದ್ದೇ ಕಳ್ಳರು ದರೋಡೆಗೆ ಸ್ಕೆಚ್ ಹಾಕಿದಂತಿದೆ. ಇದರಿಂದಾಗಿ ಕೃತ್ಯದಲ್ಲಿ ಸ್ಥಳೀಯ ಸಂಪರ್ಕ ಇರುವ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮನೆಯಲ್ಲಿರುವ ಸಿಸಿಟಿವಿಯಲ್ಲಿ ದರೋಡೆಕೋರರ ಕೃತ್ಯದ ಕೆಲವು ದೃಶ್ಯಗಳು ದಾಖಲಾಗಿವೆ. ಮುಖಕ್ಕೆ ಮಾಸ್ಕ್ ಹಾಕಿರುವುದರಿಂದ ಸ್ಪಷ್ಟ ಚಹರೆ ಸಿಕ್ಕಿಲ್ಲ. ಒಬ್ಬ ಮಾತ್ರ ಮುಖದ ಮಾಸ್ಕ್ ಅನ್ನು ಕೆಳಗೆ ಇಳಿಸಿದ್ದ. ಸಿಸಿಟಿವಿಯಲ್ಲಿ ಬರುತ್ತೆ ಎಂದು ಡಿವಿಆರ್ ಹೊತ್ತೊಯ್ಯಲು ಪ್ಲಾನ್ ಮಾಡಿದ್ದರು. ಕೊನೆ ಕ್ಷಣದ ಅರ್ಜೆಂಟಲ್ಲಿ ಡಿವಿಆರ್ ಬದಲು ಅಲ್ಲಿದ್ದ ಮಾಡೆಮ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಹೊರಗಡೆ ಸ್ವಲ್ಪ ದೂರದಲ್ಲಿ ತಮ್ಮ ವಾಹನ ನಿಲ್ಲಿಸಿದ್ದರಿಂದ ಅದರ ಕುರಿತಾಗಿಯೂ ಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಲಭಿಸಿಲ್ಲ. ಪೊಲೀಸರು ಪರಾರಿಯಾದ ವಾಹನದ ಚಿತ್ರವನ್ನು ಬಂಟ್ವಾಳಕ್ಕೆ ಸಾಗುವಲ್ಲಿ ರಸ್ತೆ ಬದಿಯೊಂದರ ಕಟ್ಟಡದ ಸಿಸಿ ಟಿವಿಯಲ್ಲಿ ಪತ್ತೆ ಮಾಡಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ.
Click this button or press Ctrl+G to toggle between Kannada and English