ಭೂತನಾಥೇಶ್ವರ ಕ್ರೀಡೋತ್ಸವಕ್ಕೆ ಅದ್ದೂರಿ ಚಾಲನೆ

1:03 PM, Saturday, January 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Sri Bhoothanatheshwara Kreedotsavaಮಂಗಳೂರು : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ 3 ನೆ ವರ್ಷದ ಕ್ರೀಡಾ ಕೂಟಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಶ್ರೀ ಭೂತನಾಥೇಶ್ವರ ಕ್ರೀಡಾಕೂಟದ ಮುಖ್ಯ ಸಂಘಟಕ, ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಅವರ ತಾಯಿ ಪುಷ್ಪಲತ ಶೆಟ್ಟಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಜನಪದ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವಂತಹ ವಿವಿಧ ಕಲಾಪ್ರಕಾರಗಳ ಮೂಲಕ ಕ್ರೀಡಾಂಗಣದ ಬಳಿ ಇರುವ ವೇದಿಕೆಯಕೆಗೆ ಕರೆತರಲಾಯಿತು.

ಶಾಸಕ ಕೃಷ್ಣ ಜೆ.ಪಾಲೆಮಾರ್, ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ಪ್ರೇಮಲತಾ ವಿ.ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಅಶ್ರಫ್, ಜಗದೀಶ್ ಅಧಿಕಾರಿ, ಮಿಥುನ್ ರೈ, ಮಂಗಳೂರು ನಗರ ಸಮಿತಿ ಬಿಜೆಪಿ ಅಧ್ಯಕ್ಷ ಶ್ರೀಕರ ಪ್ರಭು, ಚಿತ್ರ ನಟ ಶಿವಧ್ವಜ್, ನಟಿ ಹರಿಪ್ರಿಯ, ಸ್ವಾತಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Sri Bhoothanatheshwara Kreedotsavaರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ.ರಮಾನಾಥ ರೈ ಯವರು ದೂರದ ಮುಂಬಯಿಯಲ್ಲಿ ಉದ್ಯಮಿಯಾಗಿರುವ ವಿಜಯನಾಥ ವಿಠಲ ಶೆಟ್ಟಿಯವರು ಸಾಂಪ್ರದಾಯಿಕ ಕ್ರೀಡೆಗಳ ಪುನರುತ್ಥಾನದ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿಯಿಟ್ಟು, ಈ ಪ್ರದೇಶದಲ್ಲಿ ಮಾತ್ರವಲ್ಲದೇ ರಾಜ್ಯದಾದ್ಯಂತ ತುಳುನಾಡಿನ ಸಂಸ್ಕ್ರತಿಯನ್ನು ಪಸರಿಸುವ ಕೆಲಸದಲ್ಲಿ ನಿರತರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಈ ಪ್ರಯತ್ನ ಇನ್ನಷ್ಟು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಗ್ರಾಮೀಣ ಪರಂಪರೆ- ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಭೂತನಾಥೇಶ್ವರ ಕ್ರೀಡೋತ್ಸವ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿ ಮೂಡಿಬರಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದರು.

ಕ್ರೀಡೋತ್ಸವದ ಪ್ರಧಾನ ಸಂಘಟಕ ವಿಜಯನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂತಪ್ಪ ಶೆಟ್ಟಿ ಕಿನ್ನಿಮಜಲು ಸ್ವಾಗತಿಸಿದರು. ನವೀನ್ ಶೆಟ್ಟಿ, ನವೀನ್ ಹೆಗ್ಡೆ, ಪ್ರೇಮನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English