ಸ್ನೇಹಿತರ ಜೊತೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

3:09 PM, Friday, July 5th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬಂಟ್ವಾಳ : ಸ್ನೇಹಿತರ ಜೊತೆ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ನದಿಗೆ ಬಿದ್ದು ಕಣ್ಮರೆಯಾಗಿದ್ದರು.

ಅಗ್ನಿಶಾಮಕ ದಳದವರು ವ್ಯಕ್ತಿಯ ಮೃತದೇಹವನ್ನು ಇಂದು ಪತ್ತೆಹಚ್ಚಿದ್ದಾರೆ. ಮೃತರನ್ನು ಮೈಕಲ್ (53) ಎಂದು ಗುರುತಿಸಲಾಗಿದೆ.

ಸುರತ್ಕಲ್ ನ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿಂದ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ಗುರುವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಬಂಟ್ವಾಳದ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟಿಗೆ ಹೋಗಿದ್ದರು. ಈ ವೇಳೆ ಮೈಕಲ್ ಆಯತಪ್ಪಿ ನೀರಿಗೆ ಬಿದ್ದಿದ್ದರು.

ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದು ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ನಂತರ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ ಶೋಧಕಾರ್ಯ ಮುಂದುವರೆಸಿದ್ದು, ಮೃತದೇಹ ಪತ್ತೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English