ಕದ್ರಿ ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಬೈಕಿನಲ್ಲಿ ನುಗ್ಗಿ, ಅಣ್ಣಪ್ಪ ದೈವದ ಕತ್ತಿ ತೆಗೆದು ದಾಂಧಲೆ ಮಾಡಿದ ಆಗಂತುಕ

11:00 PM, Tuesday, July 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಕದ್ರಿ ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಖಾಸಗಿ ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬಾತ ಮಹಾಪೂಜೆ ವೇಳೆ ದೇವಾಲಯದಲ್ಲಿ ಈ ರೀತಿಯ ದಾಂಧಲೆ ನಡೆಸಿದ್ದಾನೆ. ಈತ ದೇವಾಲಯ ಒಳಾಂಗಣಕ್ಕೆ ಬೈಕ್ ತಂದು ಅಣ್ಣಪ್ಪ ದೈವದ ಕತ್ತಿ(ಕಡ್ತಲೆ) ತೆಗೆದು ದಾಂಧಲೆ ಮಾಡಿದ್ದಾನೆ. ದೇವಾಲಯದ ಸೆಕ್ಯುರಿಟಿ ಇದ್ದರೂ ಒಳಾಂಗಣಕ್ಕೆ ಬೈಕ್ ತಂದು, ಅಣ್ಣಪ್ಪ ದೈವದ ಗುಡಿಯೊಳಗೆ ನುಗ್ಗಿ ಮಂಟಪದ ಮೇಲೆ ಹತ್ತಿ ದಾಂಧಲೆ ಮಾಡಿರುತ್ತಾನೆ.

ಅಣ್ಣಪ್ಪ ದೈವದ ಕಡ್ತಲೆ ಮುಟ್ಟಿದ ಹಿನ್ನೆಲೆ ಶುದ್ಧೀಕರಣ ಮಾಡಲಾಗಿದೆ. ಈ ಹಿಂದೆಯೂ ಸುಧಾಕರ ಆಚಾರ್ಯ ಬೇರೆ ಎರಡು ಮೂರು ದೇವಾಲಯಗಳಿಗೆ ನುಗ್ಗಿ ದಾಂಧಲೆ ನಡೆಸಿರುತ್ತಾನೆ. ಇನ್ನು ಈತ ದೇವಾಲಯದ ಆವರಣದೊಳಗೆ ಬೈಕ್ ತಂದ ವೇಳೆ ಭಕ್ತರಿಗೂ ಗಾಯಗಳಾಗಿದೆ ಎಂದು ದೇವಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English