ಮಂಗಳೂರು : ಮೊಬೈಲ್ ಒಳಗೆ ಬ್ಯಾಟರಿ ಗಾತ್ರದಲ್ಲಿ ಚಿನ್ನದ ಬಿಸ್ಕಿಟ್‌ಗಳನ್ನು ಇರಿಸಿ ಅಕ್ರಮ ಸಾಗಾಟ ಮಾಡುತ್ತಿದ್ದ ಕಾಸರಗೋಡು ತಳಂಗೆರೆ ನಿವಾಸಿ ಮೊಹಮ್ಮದ್ ಆಲಿ ಮೊಯ್ದಿನ್ ಕುಂಞಿ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ಜನವರಿ 18 ಶುಕ್ರವಾರ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು ಮೂರು ಮೊಬೈಲ್‌ನಲ್ಲಿ ಸುಮಾರು 10.85 ಲಕ್ಷ ರೂ. ವೌಲ್ಯದ 349.970 ಗ್ರಾಂ. ತೂಕದ ಮೂರು ಚಿನ್ನದ ಬಿಸ್ಕಿಟ್‌ಗಳು ಪತ್ತೆಯಾಗಿದೆ. ಆರೋಪಿ ದುಬೈಯಿಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಸಂದರ್ಭ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.
Click this button or press Ctrl+G to toggle between Kannada and English