ಫಲಾನುಭವಿಗಳಿಗೆ ರೂ 7,48,531/- ಮೊತ್ತದ ಚೆಕ್ ವಿತರಿಸಿದ ಮೇಯರ್

8:38 PM, Friday, July 12th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಹಾನಗರಪಾಲಿಕೆಯ ಶೇ 24.10℅, 7.25% ಮತ್ತು 5% ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 19 ಫಲಾನುಭವಿಗಳಿಗೆ ಮೇಯರ್ ಸುಧೀರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ರೂ 7,48,531/- ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಪಾಲಿಕೆಯ ಮೇಯರ್ ರವರ ಕೊಠಡಿಯಲ್ಲಿ ಆಯೋಜಿಸಲಾದ ಈ ಕಾಯ೯ಕ್ರಮದಲ್ಲಿ ಶೇ 24.10 ಯೋಜನೆಯಡಿ ಬರುವ ಪರಿಷಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ದುರಸ್ತಿ, ಮನೆ ನಿಮಾ೯ಣ, ತಾಳಿಭಾಗ್ಯ ಮುಂತಾದ ಸವಲತ್ತು ಪಡೆಯಲು ಸಹಾಯಧನ, ಶೇ 7.25 ರ ನಿಧಿಯಡಿ ಹಿಂದುಳಿದ ವಗ೯ದ ಸುಮಾರು 7 ಮಂದಿಗೆ ಶಸ್ತ್ರಾ ಚಿಕಿತ್ಸ ವೆಚ್ಚ, ಶೌಚಾಲಯ ನಿಮಾ೯ಣ, ನಳ್ಳಿ ನೀರಿನ ಜೋಡಣೆ ಮೊತ್ತ, ಹಾಗೆಯೆ ಶೇ 5% ರ ನಿಧಿಯಡಿ ಅಂಗವಿಕಲರಿಗೆ ಪಕ್ಕಾ ಮನೆ, ಮನೆ ದುರಸ್ತಿ, ವೈದ್ಯಕೀಯ ವೆಚ್ಚ ಮುಂತಾದ ಸಹಾಯ ಧನದ ಚೆಕ್ಕನ್ನು ನೀಡಲಾಯಿತು. ಕಾಯ೯ಕ್ರಮದಲ್ಲಿ ಉಪಮೇಯರ್ ಸುನೀತ, ಅಧ್ಯಕ್ಷರಾದ ವರುಣ್ ಚೌಟ, ಗಣೇಶ್ ಕುಲಾಲ್, ಸದಸ್ಯರುಗಳಾದ ಕಿಶೋರ್ ಕೊಟ್ಟಾರಿ, ನಯನ ಆರ್ ಕೋಟ್ಯಾನ್, ರೂಪಶ್ರೀ, ಜಯಲಕ್ಷ್ಮೀ ಶೆಟ್ಟಿ, ಶಂಶಾದ್ ಅಬೂಬಕರ್, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English