ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ, ಆತನ ಮೇಲಿದೆ 15 ಕೇಸುಗಳು

9:59 PM, Friday, July 12th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೆ ಕೆಲಸಕ್ಕೆ ಸೇರಿದ್ದ ಬಡ ಕುಟುಂಬಕ್ಕೆ ಸೇರಿದ್ದ ಹಿಂದೂ ಯುವತಿಯೊಬ್ಬಳನ್ನು ಮುಸ್ಲಿಂ ಯುವಕ ಪ್ರೀತಿಯ ನಾಟಕವಾಡಿ ಕಿಡ್ನಾಪ್ ಮಾಡಿರುವುದಾಗಿ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಸರಗೋಡಿನ ವಿದ್ಯಾನಗರ ನಿವಾಸಿಯೇ ಆಗಿರುವ ಮಹಮ್ಮದ್ ಅಶ್ಫಾಕ್ ಎಂಬಾತ ಯುವತಿಯನ್ನು ಪ್ರೇಮ ಪಾಶಕ್ಕೆ ಸಿಲುಕಿಸಿ ಕಿಡ್ನ್ಯಾಪ್ ಮಾಡಿದ್ದಾನೆ. ಅಶ್ಫಾಕ್ ಮೇಲೆ ಕಾಸರಗೋಡು ನಗರದ ಎರಡು ಠಾಣೆಗಳಲ್ಲಿ 15 ಕೇಸು ದಾಖಲಾಗಿದ್ದು, ಮೂರು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಅಲ್ಲದೆ, ಈ ಹಿಂದೆ ಎರಡು ಹೆಣ್ಮಕ್ಕಳನ್ನು ಮದುವೆಯಾಗಿ ಬಿಟ್ಟಿದ್ದಾನೆ. ಇಂಥ ಕ್ರಿಮಿನಲ್ ಹಿನ್ನೆಲೆಯ ಯುವಕನ ಜೊತೆಗೆ ಸಂಪರ್ಕ ಆಗಿರುವುದು ತಿಳಿಯುತ್ತಲೇ ಆಕೆಯನ್ನು ಉಳ್ಳಾಲದ ಸಂಬಂಧಿಕರ ಮನೆಯಲ್ಲಿ ಇರಿಸಿದ್ದರು. ಆದರೆ, ಅಶ್ಫಾಕ್ ಉಳ್ಳಾಲಕ್ಕೆ ಬಂದು ಆಕೆಯನ್ನು ಕರೆದೊಯ್ದಿದ್ದು ಜೊತೆಗೆ ಇರಿಸಿಕೊಂಡಿದ್ದ. ವಿಚಾರ ತಿಳಿದ ತಂದೆ ಮಂಗಳೂರಿಗೆ ಬಂದು ಪೊಲೀಸರಿಗೆ ಕಿಡ್ನಾಪ್ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿ, ಆಕೆಯನ್ನು ಕರೆತಂದಿದ್ದು, ಯುವತಿ ತನ್ನ ಇಷ್ಟದ ರೀತಿ ಆತನ ಜೊತೆಗೆ ತೆರಳಿದ್ದಾಗಿ ಹೇಳಿರುವುದು ಕುಟಂಬ ಮತ್ತು ಪೊಲೀಸರಿಗೆ ಸಂಕಟ ಸೃಷ್ಟಿಸಿದೆ.

ಪ್ರೇಮ ಪಾಶಕ್ಕೆ ಸಿಲುಕಿದ ಯುವತಿಯ ತಂದೆ, ಕಾಸರಗೋಡಿನ ವಿದ್ಯಾನಗರ ನಿವಾಸಿ ವಿನೋದ್ ಮಂಗಳೂರಿಗೆ ಬಂದು ಕಣ್ಣೀರು ಹಾಕಿದ್ದಾರೆ. 20 ವರ್ಷಗಳಿಂದ ಕಷ್ಟಪಟ್ಟು ಸಲಹಿದ ಮಗಳು ನಮ್ಮ ಸಂಬಂಧವನ್ನೇ ಕಡಿದು ಯಾರೋ ಕೆಲಸ ಇಲ್ಲದ ರೌಡಿಯ ಜೊತೆಗೆ ಹೋಗಿದ್ದಾಳಲ್ಲಾ.. ನಾನೇನು ಮಾಡಲಿ ಕಣ್ಣೀರು ಹಾಕಿದ್ದಾರೆ.

ವಿನೋದ್ ಅವರ 20 ವರ್ಷದ ಮಗಳು ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದಳು. ಕಳೆದ ವರ್ಷ ಪ್ರಥಮ ವರ್ಷ ಪೂರೈಸಿದ್ದ ಆಕೆಯ ಎರಡನೇ ವರ್ಷದ ಫೀಸು ಕಟ್ಟಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಬಡ ಕುಟುಂಬವಾಗಿದ್ದು, ವಿನೋದ್ ಅವರು ವಿದ್ಯಾನಗರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನವರು ಎರಡನೇ ವರ್ಷ ಕಲಿಯೋದಕ್ಕೆ ಬಿಡದೆ, ಜೊತೆಗೆ ಆಕೆಯ ಶಿಕ್ಷಣದ ಒರಿಜಿನಲ್ ದಾಖಲೆ ಪತ್ರಗಳನ್ನೂ ತೆಗೆದಿಟ್ಟಿದ್ದರು. ಇದರಿಂದಾಗಿ ಬೇರೆ ಕಡೆ ಕಲಿಯುವುದಕ್ಕೂ ಹೋಗಲಾಗದೆ, ಆಕೆ ವಿದ್ಯಾನಗರದಲ್ಲಿ ಕೆಲಸಕ್ಕೆ ಸೇರಿದ್ದಳು.

ಈಗ ಯುವತಿಯನ್ನು ಪೊಲೀಸರು ಕರೆತಂದು ಮಂಗಳೂರಿನ ಕೌನ್ಸಿಲಿಂಗ್ ಸೆಂಟರ್ ಒಂದಕ್ಕೆ ಸೇರಿಸಿದ್ದಾರೆ. ಆದರೆ ಆಕೆ ಹೆತ್ತವರ ಮಾತನ್ನು ಕೇಳದ ಸ್ಥಿತಿಯಲ್ಲಿರುವುದನ್ನು ಕಂಡು ಸ್ವತಃ ತಂದೆಯೇ ಖುದ್ದು ಹೋಗಿದ್ದಾರೆ. ಆತ ನಿರಂತರ ಅಪರಾಧ ಚಟುವಟಿಕೆ ನಡೆಸುತ್ತಿದ್ದು ಪೊಲೀಸರು ಗೂಂಡಾ ಆಕ್ಟ್ ಹಾಕುವ ಸಾಧ್ಯತೆಯಿದೆ. ಈಗಲೇ ಜಾಮೀನಿನಲ್ಲಿ ಹೊರಗಿದ್ದಾನೆ. ಆಕೆ ಪ್ರಾಯ ಪ್ರಬುದ್ಧಳಾಗಿರುವುದು ತನ್ನ ಇಷ್ಟದ ರೀತಿ ನಡೆದುಕೊಳ್ಳುತ್ತೇನೆ ಎನ್ನುವ ರೀತಿ ಮಾತಾಡುತ್ತಿದ್ದಾಳಂತೆ.

ಬಡ ಕುಟುಂಬದ ವಿನೋದ್ ಮಂಗಳೂರಿಗೆ ಬಂದು ವಿಶ್ವ ಹಿಂದು ಪರಿಷತ್ ನಾಯಕರ ಸಹಾಯ ಕೇಳಿದ್ದಾರೆ. ಹೀಗಾಗಿ ಬಜರಂಗದಳ ನಾಯಕರು, ಕೃತ್ಯದ ಹಿಂದೆ ಲವ್ ಜಿಹಾದ್ ಆರೋಪ ಮಾಡಿದ್ದಾರೆ. ಹಿಂದು ಯುವತಿಯನ್ನು ಇಸ್ಲಾಮಿಗೆ ಮತಾಂತರ ಮಾಡುವ ಉದ್ದೇಶದಿಂದ ಮುಸ್ಲಿಂ ಯುವಕರು ಈ ಕೃತ್ಯ ಮಾಡುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲವಿದ್ದು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್ ಹಿನ್ನೆಲೆಯ ಆ ಯುವಕನನ್ನು ಪೊಲೀಸರು ಕರೆತಂದು ವಿಚಾರಣೆ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English