ಸೂಕ್ತ ಅಧ್ಯಯನ ಹಾಗೂ ಶ್ರೇಷ್ಠ ಅಧ್ಯಾಪನ ಬದುಕು ರೂಪಿಸುತ್ತದೆ: ಕಜಂಪಾಡಿ ಸುಬ್ರಹ್ಮಣ್ಯ ಭಟ್

9:15 PM, Saturday, July 13th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಶಬ್ದಗಳಿಗೆ ಅದರದ್ದೇ ಆದ ಮಹತ್ವವಿದೆ. ಗುರು ಎಂಬ ಶಬ್ದವು ಬಹಳ ಶ್ರೇಷ್ಠ ಪದ. ವಿದ್ಯಾರ್ಥಿಗಳ ಬುದ್ಧಿಯನ್ನು ಜಾಗೃತಗೊಳಿಸಿ ಅವರನ್ನು ವಿಕಾಸಗೊಳಿಸುವುದು ಗುರುಗಳ ಕೆಲಸ.ತನ್ನ ಶಿಷ್ಯನಲ್ಲಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನದ ದೀಪವನ್ನು ಯಾರು ಬೆಳಗುತ್ತಾನೆಯೋ ಆತ ನಿಜವಾದ ಗುರು ಎಂದು ಕರೆಸಿಕೊಳ್ಳುತ್ತಾನೆ, ಎಂದು ಕಾಸರಗೋಡಿನ ನಿವೃತ್ತ ಶಿಕ್ಷಕ, ಖ್ಯಾತ ವಾಗ್ಮಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಕಾಲೇಜಿನಲ್ಲಿ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಾ ಬಂದಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಗುರುಪರಂಪರೆಯ ಮಹತ್ವವನ್ನು ತಿಳಿಸುವ ಕಾರ್ಯವನ್ನು ಅಧ್ಯಾಪಕರು ಮಾಡಬೇಕಾಗಿದೆ, ಎಂದರು.

ಗುರು ಇಲ್ಲದೆ ಯಾವ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಿಲ್ಲ.ಭಾರತದ ಕೀರ್ತಿ ಹಾಗೂ ಮೌಲ್ಯ ಗಳನ್ನು ಮೇರು ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಮುಂದಿನ ಪ್ರಜೆಗಳನ್ನು ರೂಪಿಸುವ ಕಾರ್ಯವನ್ನು ಇಲ್ಲಿನ ವಿದ್ಯಾಕ್ಷೇತ್ರಗಳಲ್ಲಿರುವ ಅಧ್ಯಾಪಕರು ಮಾಡಬೇಕು, ಎಂದು ಭಟ್ ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಜಂಟಿ ಕಾರ್ಯದರ್ಶಿ ಮಾಧವ ಎನ್. ಕೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರ ಮುರಳಿಕೃಷ್ಣ ಕೆ. ಎನ್,ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷೆ ಡಾ. ಸುಧಾ ಎನ್ ವೈದ್ಯ ಸ್ವಾಗತಿಸಿ, ಕಾರ್ಯದರ್ಶಿ ವೆಂಕಟೇಶ ನಾಯಕ್ ವಂದಿಸಿ, ಮೂಡುಬಿದಿರೆಯ ಧವಳಾ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಿಕಾ ರಾವ್ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English