ಮಂಗಳೂರು: ಫರೀದಾಬಾದ್ ಅರುಣ್ ಜೇಟ್ಲಿ ಹಣಕಾಸಿನ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ ಮತ್ತು ಸಿಮ್ಲಾ ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಮತ್ತು ಅಕೌಂಟ್ಸ್‌ನ ಶೈಕ್ಷಣಿಕ ಸಮಿತಿ ಸದಸ್ಯರಾಗಿ ನವದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ (ಜೆಎನ್‌ಯು ) ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಮೇಶ್ ಸಾಲ್ಯಾನ್ ಅವರನ್ನು ಎರಡು ವರ್ಷಗಳ ಅವಧಿಗೆ ಜೆಎನ್‌ಯು ಕುಲಪತಿ ನಾಮನಿರ್ದೇಶನಗೊಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಶೆಟ್ಟೇಪಾಲ್ ಚಂದ್ರಶೇಖರ ಪೂಜಾರಿ ಮತ್ತು ರತ್ನಾವತಿ ದಂಪತಿ ಪುತ್ರರಾಗಿರುವ ಇವರು, ತುಮಕೂರು ವಿವಿಯಲ್ಲಿ 13 ವರ್ಷ, ಸಹಾಯಕ, ಸಹಪ್ರಾಧ್ಯಾಪಕರಾಗಿ, ಪರೀಕ್ಷಾಂಗ ಉಪಕುಲಸಚಿವ, ಕಾನೂನುಕೋಶ ಉಪಕುಲಸಚಿವ, ಸಂಶೋಧನಾ ನಿರ್ದೇಶಕರಾಗಿ ಸೇರಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಇವರು ಜವಾಹರಲಾಲ್ ನೆಹರು ವಿವಿಯ ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನಾ ಕೇಂದ್ರದಲ್ಲಿ ಪ್ರಾಧ್ಯಾಪಕರರಾಗಿ ನೇಮಕಗೊಂಡ ಪ್ರಥಮ ಕನ್ನಡಿಗರಾಗಿದ್ದಾರೆ.
Click this button or press Ctrl+G to toggle between Kannada and English