ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

3:49 PM, Saturday, January 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Laptops distributed Mangalore Universityಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಲಾಗುವ ಅದೆಷ್ಟೋ ಅನುದಾನಗಳು ಸೂಕ್ತ ಫಲಾನುಭವಿಗಳಿಗೆ ದೊರಕದೆ ವೈಯುಕ್ತಿಕ ನೆಲೆಯಲ್ಲಿ ದುರುಪಯೋಗವಾಗುತ್ತಿವೆ. ಆದರೆ ವಿಶ್ವ ವಿದ್ಯಾಲಯಗಳಲ್ಲಿ ಅಂತಹ ಪ್ರಕರಣ ಕಡಿಮೆ, ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅನುದಾನ ಅವರಿಗೆ ಆಸರೆಯಾಗಬೇಕೇ ಹೊರತು ಅದು ಶಾಶ್ವತ ಊರುಗೋಲಾಗಬಾರದು. ಅನುದಾನ ಪಡೆದವರು ಮುಂದಿನ ದಿನಗಳಲ್ಲಿ ತಮಗಿಂತಲೂ ಬಡವರು, ತುಳಿತಕ್ಕೊಳಗಾದವರು ಮತ್ತು ಅಸಹಾಯಕರಿಗೆ ದೊರಕುವಂತೆ ಮಾಡುವ ಉದಾರವಾದಿಗಳಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.

ಅವರು ಶುಕ್ರವಾರ ಮಂಗಳೂರು ವಿಶ್ವ ವಿದ್ಯಾಲಯ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರದ 22.75 ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಬಡ ದಲಿತರಿಗೆ ಸಿಗಬೇಕಾದ ಅದೆಷ್ಟೋ ಸೌಲಭ್ಯಗಳು ಬಲಾಡ್ಯ ರ ಪಾಲಾಗುತ್ತಿವೆ. ದಲಿತರು ತಮಗೆ ಸಿಗುವ ಅನುದಾನಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದವರು ಹೇಳಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಿದ 1 ಕೋಟಿ 45 ಲಕ್ಷ ರೂಪಾಯಿ ಅನುದಾನದಲ್ಲಿ ಇನ್ನೂ 29ಲಕ್ಷ ರೂಪಾಯಿ ಖರ್ಚಾಗದೆ ಉಳಿದಿದ್ದು ಇದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಇತರ ಬೇಡಿಕೆಗಳಾದ ಹಾಸ್ಟೆಲ್ ಕಟ್ಟಡ ನಿರ್ಮಾಣ ಮೊದಲಾದ ಕಾಮಗಾರಿಗೆ ಬಳಸಲು ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಹಾಗು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಮಂಜೂರಾತಿಗೂ ಮನವಿ ಮಾಡಿದ್ದೇನೆ. ಹಾಗೆಯೇ ಈ ಹಿಂದೆ ನೀಡುತ್ತಿದ್ದ 5 ಸಾವಿರ ರೂಪಾಯಿ ಫೆಲೋಶಿಪ್‌ನ್ನು ತಾನು ಅಧಿಕಾರ ವಹಿಸಿದ ಬಳಿಕ 8 ಸಾವಿರ ರೂ.ಗಳಿಗೆ ಏರಿಸಿದ್ದೇನೆ ಎಂದು ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English