ವೀರ ವೆಂಕಟೇಶ ದೇವರ ಚಾತುರ್ಮಾಸ ಪ್ರಾರಂಭ

5:10 PM, Tuesday, July 16th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ ದೇವರ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ಆಚರಣೆಗೆ ವಿಧ್ಯುಕ್ತವಾಗಿ ಇಂದು ವೈದಿಕ ವಿಧಿವಿಧಾನದೊಂದಿಗೆ ಪ್ರಾರಂಭಗೊಂಡಿತು .

ಪ್ರಾತಃ ಕಾಲ ಸಮಸ್ತ ಸಮಾಜಬಾಂಧವ ರೊಂದಿಗೆ ಶ್ರೀ ದೇವಳದ ಆಡಳಿತ ಮಂಡಳಿ ಹಾಗೂ ವಿದ್ವತ್ ವೈದಿಕರು ಶ್ರೀ ದೇವರ ಸನ್ನಿಧಾನದಲ್ಲಿ ಮಹಾಪ್ರಾರ್ಥನೆ ನಡೆಸಿ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ ,ಪುಳಕಾಭಿಷೇಕ , ಪವಮಾನಾಭಿಷೇಕ ಹಾಗೂ ಶತ ಕಲಶಾಭಿಷೇಕಗಳು ಜರಗಿದವು , ಮಧ್ಯಾನಃ ಪೂಜೆ ಬಳಿಕ ಸಮಾರಾಧನೆ ನಡೆಯಿತು . ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್ , ವೇದಮೂರ್ತಿ ಚಂದ್ರಕಾಂತ್ ಭಟ್ ತಂತ್ರಿಗಳಾದ ಪಂಡಿತ್ ಕಾಶೀನಾಥ್ ಆಚಾರ್ಯ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

ವೆಂಕಟರಮಣ ದೇವಳದಲ್ಲಿ ” ಲಕ್ಷ ಪ್ರದಕ್ಷಿಣೆ “

ಶ್ರೀ ವೆಂಕಟರಮಣ ದೇವಸ್ಥಾನ , ರಥಬೀದಿ , ಮಂಗಳೂರು ಶ್ರೀ ಕ್ರೋಧಿ ನಮ ಸಂವತ್ಸರದ ಆಷಾಡ ಶುದ್ಧ ಏಕಾದಶಿ ತಾ . 12.07.2024 ನೇ ಬುಧವಾರದಿಂದ ಕಾರ್ತಿಕ ಶುದ್ಧ ಏಕಾದಶಿ ತಾ . 12.11.2024 ನೇ ಕುಜವಾರದ ವರೆಗೆ ಶ್ರೀ ದೇವಳದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ” ಲಕ್ಷ ಪ್ರದಕ್ಷಿಣೆ ” ಕಾರ್ಯಕ್ರಮವು ನಡೆಯಲಿದೆ . ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12.30 ರ ವರೆಗೆ ಭಕ್ತಾದಿಗಳಿಗೆ ಪ್ರದಕ್ಷಿಣೆಗೆ ಅವಕಾಶವಿದ್ದು ಮಾತೆಯರು , ಮಹನೀಯರು , ಹಾಗೂ ಮಕ್ಕಳು ಲಕ್ಷ ಪ್ರದಕ್ಷಿಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಮತ್ತು ಶ್ರೀ ಗುರುವರ್ಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ . ಆಡಳಿತ ಮಂಡಳಿ , ಶ್ರೀ ವೆಂಕಟರಮಣ ದೇವಸ್ಥಾನ , ರಥ ಬೀದಿ , ಮಂಗಳೂರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English