ಮಾಜಿ ಸಚಿವ ಬಿ.ರಮಾನಾಥ ರೈ ಹುಟ್ಟುಹಬ್ಬ ಪ್ರಯುಕ್ತ ಮಹಿಳಾ ಕಾಂಗ್ರೆಸ್ ಸದಸ್ಯೆಯರಿಂದ ‘ದುರ್ಗಾ ಪೂಜೆ’

10:08 PM, Saturday, September 17th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಮಾಜಿ ಸಚಿವ

ಬಂಟ್ವಾಳ: ಜಿಲ್ಲೆಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಬಿ.ರಮಾನಾಥ ರೈ ಇವರ ಹುಟ್ಟುಹಬ್ಬ ಪ್ರಯುಕ್ತ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಮಾಣಿಯಲ್ಲಿ ‘ಸಾಮೂಹಿಕ ದುರ್ಗಾ ಪೂಜೆ’ ನೆರವೇರಿಸಿ ಗಮನ ಸೆಳೆದರು.

ಇಲ್ಲಿನ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪುರೋಹಿತ ರವಿ ಶಾಂತಿ ನೇತೃತ್ವದ ತಂಡವು ವಿವಿಧ ವೈದಿಕ ವಿಧಿವಿಧಾನ ಸಹಿತೆ ಸಾಮೂಹಿಕ ದುರ್ಗಾ ಪೂಜೆ ನೆರವೇರಿಸಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿಶಾ ಬರಿಮಾರು ಇವರನ್ನು ರಮಾನಾಥ ರೈ ಸನ್ಮಾನಿಸಿದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಪಾಲ್ಗೊಂಡರು.

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೇಟ್ ಪಿಂಟೊ, ಉಪಾಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಬಿಲ್ಲವ ಸಂಘದ ಗೌರವಾದ್ಯಕ್ಷ ಈಶ್ವರ ಪೂಜಾರಿ, ನಾರಾಯಣ ಸಾಲ್ಯಾನ್, ಅಧ್ಯಕ್ಷ ಸುರೇಶ್ ಸೂರ್ಯ, ಪ್ರಮುಖರಾದ ವಾಸು ಪೂಜಾರಿ, ಡಾ.ಮನೋಹರ್ ರೈ, ನಿರಂಜನ್ ರೈ, ಶ್ರೀಧರ್ ರೈ, ಮಂಜುಳಾ ಕುಶಲ ಪೆರಾಜೆ, ಐಡಾ ಸುರೇಶ್, ಅಶೋಕ್ ಪೂಜಾರಿ ಬರಿಮಾರ್, ಉಮೇಶ್ ಕುಲಾಲ್ ನಾವೂರು, ವೆಂಕಪ್ಪ ಪೂಜಾರಿ, ಶಿವಪ್ರಸಾದ್ ಕಳ್ಳಿಗೆ, ಸತೀಶ್ ಅನಂತಾಡಿ, ಪ್ರೀತಿ ಡಿನ್ನಾ, ರಮಣಿ ಮಾಣಿ ಮತ್ತಿತರರು ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English