ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ

1:09 PM, Saturday, July 20th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ, ಮೂರು ವಾಸದ ಮನೆಗಳು ಸೇರಿದಂತೆ ಚಿನ್ನಾಭರಣ, ಜಮೀನು ಮಾಡಿಕೊಂಡಿರುವುದು ಪತ್ತೆಯಾಗಿದೆ.

ಮೈಸೂರು, ಬೆಂಗಳೂರು ಸೇರಿದಂತೆ ಮೂರು ಮನೆಗಳಿವೆ. ಇದಲ್ಲದೆ, ನಾಲ್ಕು ಎಕರೆ 27 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಇದರ ಆಸ್ತಿ ಮೌಲ್ಯ 2.12 ಕೋಟಿ ಆಗಿರುತ್ತದೆ. 19.40 ಲಕ್ಷ ಮೌಲ್ಯದ ಚಿನ್ನಾಭರಣಗಳು, 20.50 ಲಕ್ಷ ಮೌಲ್ಯದ ವಾಹನಗಳು, ಜಮೀನು ಖರೀದಿಸಲು 10 ಲಕ್ಷ ಮುಂಗಡ ಹಣ ನೀಡಿರುವುದು, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಇರುವುದು ಪತ್ತೆಯಾಗಿದೆ. ಆನಂದ್ ಸಿ.ಎಲ್. ಅವರ ಒಟ್ಟು ಆಸ್ತಿ ಮೌಲ್ಯ 2.77 ಕೋಟಿ ಆಗಿರುತ್ತದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ರಾಜ್ಯದಾದ್ಯಂತ 12 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 54 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ಕಾರ್ಯಾಚರಣೆ ನಡೆಸಿದ್ದರು. ಮಂಗಳೂರಿನ ಪಾಲಿಕೆ ಕಮಿಷನರ್ ಆನಂದ್ ಅವರ ಮಣ್ಣಗುಡ್ಡೆಯ ಬಂಗಲೆ, ಪಾಲಿಕೆಯ ಕಚೇರಿ, ಮೈಸೂರು, ಬೆಂಗಳೂರಿನ ಮನೆ, ಮಂಡ್ಯದ ಮನೆಗಳಿಗೆ ದಾಳಿ ನಡೆದಿತ್ತು. ಇವರು ಈ ಹಿಂದೆ ಬಿಡಿಎ ಅಧಿಕಾರಿಯಾಗಿದ್ದಾಗ ಅಕ್ರಮ ಆಸ್ತಿ ಮಾಡಿದ್ದಾರೆಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English