ಮಂಗಳೂರು: ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ ಇದರ ವರ್ಷ 2024-25 ರ ಸಾಲಿನ ಸಂಪುಟ ಪದಗ್ರಹಣ ಸಮಾರಂಭ “ಕಾವೇರಿ” ಶನಿವಾರದಂದು ಎಕ್ಕೂರಿನ ಇಂಡಿಯಾನಾ ಕನ್ವೆನ್ಸನ್ ಸೆಂಟರ್ ನಲ್ಲಿ ಜರುಗಲಿರುವುದು ಎಂದು ಲಯನ್ಸ್ ಜಿಲ್ಲೆ ಮಂಗಳೂರು 317-ಡಿ ಇದರ ರಾಜ್ಯಪಾಲೆ ಬಿ.ಎಂ ಭಾರತಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರಾಜ್ಯಪಾಲರಾದ ಬಿ.ಎಂ.ಭಾರತಿ ಅವರು ಜಿಲ್ಲಾ ಪದಗ್ರಹಣದ “ಕಾವೇರಿ” ಅಧ್ಯಕ್ಷತೆ ವಹಿಸಲಿರುವರು ಹಾಗೂ ಉದ್ಘಾಟನೆಯನ್ನು ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ಅಂತರಾಷ್ಟ್ರೀಯ ಎಲ್.ಸಿ.ಐ.ಎಫ್ ಇದರ ಟ್ರಸ್ಟೀ ಹಾಗೂ ಮಾಜಿ ಅಂತರಾಷ್ಟ್ರೀಯ ನಿರ್ದೇಶಕಿಯಾದ ಅರುಣಾ ಅಬೆ ಒಸ್ವಾಲ್ ಅವರು ಭಾಗವಹಿಸಲಿರುವರು. ಎಲ್.ಸಿ.ಐ.ಎಫ್ ಕ್ಷೇತ್ರ ನಾಯಕ ಹಾಗೂ ಮಾಜಿ ಅಂತರಾಷ್ಟ್ರೀಯ ನಿರ್ದೇಶಕ ವಂಶಿದ ಬಾಬು ಕೆ, ಮಾಜಿ ಅಂತರಾಷ್ಟ್ರೀಯ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ,
ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಡಾ.ಎನ್. ಕೃಷ್ಣ ಗೌಡ ಅತಿಥಿಗಳಾಗಿ ಭಾಗವಹಿಸಲಿರುವರು. ನಿಕಟಪೂರ್ವ ರಾಜ್ಯಪಾಲರಾದ ಡಾ.ಮೆಲ್ವಿನ್ ಡಿ’ಸೋಜಾ ಅವರು ಜಿಲ್ಲಾ ರಾಜ್ಯ ಪಾಲರ ತಂಡವನ್ನು ಪರಿಚಯಿಸಲಿರುವರು.
ಪ್ರಥಮ ಉಪರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈ ಅವರು ಜಿಲ್ಲಾ ಸಂಪುಟ ಸದಸ್ಯರ ಪರಿಚಯದ ಕೈ ಪಿಡಿ “ಕಾವೇರಿ”ಯನ್ನು ಬಿಡುಗಡೆಗೊಳಿಸುವರು. ದ್ವೀತಿಯ ಉಪರಾಜ್ಯಪಾಲರಾದ ಎಚ್.ಎಂ. ತಾರಾನಾಥ್ ಅವರು ಶುಭಾಂಶನೆಗೈಯಲಿರುವರು ಎಂದು ಮಾಹಿತಿ ನೀಡಿದರು.
ಇದು ಮಾತ್ರವಲ್ಲದೆ ಲಯನ್ಸ್ ಜಿಲ್ಲೆ ಮಂಗಳೂರು 317-ಡಿ 2024-25 ರ ಸಾಲಿನ ಸಂಪುಟ ಕಾರ್ಯದರ್ಶಿ ಗೀತಾ ಆರ್. ರಾವ್, ಸಂಪುಟ ಖಜಾಂಜಿ ಶಶಿಧರ ಮಾರ್ಲ, ಸಂಪುಟ ಸಂಯೋಜಕ ಒಸ್ವಾಲ್ಡ್ ಡಿ’ಸೋಜಾ, ಜಿಲ್ಲಾ ರಾಜ್ಯಪಾಲರ ಸಂಯೋಜಕಿ ಉಮಾ ಹೆಗ್ಡೆ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಮತ್ತು ಜಿಲ್ಲಾ ಲಿಯೋ ಅಧ್ಯಕ್ಷ ಸಮೀಕ್ಷಾ ರಿಯಾ, ಸಂಪುಟ ಪದಗ್ರಹಣ “ಕಾವೇರಿ” ಇದರ ಸಂಘಟನಾ ಸಮಿತಿಯ ಅಧ್ಯಕ್ಷ ಮನೋರಂಜನ್ ಕೆ. ಆರ್, ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕ, ಖಜಾಂಜಿ, ಚಂದ್ರಹಾಸ್ ರೈ ಅವರು ಉಪಸ್ಥಿತರಿರಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಗೀತಾ ರಾವ್, ಶ್ರೀನಿವಾಸ್ ಪೂಜಾರಿ, ಹರೀಶ್ ಆಳ್ವ, ವಿಜಯ ವಿಷ್ಣು ಮಯ್ಯ, ಮನೋರಂಜನ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English