ಬೀದಿ ಬದಿ ಗೂಡಂಗಡಿಗಳ ಮೇಲೆ ಜೆಸಿಬಿ ಬಳಸಿ “ಟೈಗರ್ ಕಾರ್ಯಾಚರಣೆ’

6:34 PM, Thursday, August 1st, 2024
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು: ಅನಧಿಕೃತ ಗೂಡಂಗಡಿಗಳ ತೆರವಿಗಾಗಿ ಪಾಲಿಕೆಯಿಂದ ನಡೆಯುತ್ತಿದ್ದ “ಟೈಗರ್ ಕಾರ್ಯಾಚರಣೆ’ ಮುಂದುವರಿದಿದ್ದು ಗುರುವಾರ ಬೆಳಗ್ಗೆ 10.30 ರ ಸುಮಾರಿಗೆ ಮಂಗಳೂರು ನಗರದ ಆರ್ ಟಿಓ ಬಳಿ ಆರಂಭಗೊಂಡ ಕಾರ್ಯಾಚರಣೆ ಸ್ಟೇಟ್ ಬ್ಯಾಂಕ್ ನ ಮೀನು ಮಾರುಕಟ್ಟೆಯ ಬಳಿ ಫುಟ್ ಪಾತ್ ಅತಿಕ್ರಮಿಸಿಕೊಂಡ ತರಕಾರಿ ಅಂಗಡಿ ಸೇರಿ ಹಲವು ಅಂಗಡಿಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಯಿತು. ಮುಟ್ಟುಗೋಲು ಹಾಕಿದ ಅಂಗಡಿಗಳ ಸರಂಜಾಮುಗಳನ್ನು ಟಿಪ್ಪರ್ ಗಳಲ್ಲಿ ತುಂಬಿಸಿ ಕೊಂಡೊಯ್ಯಲಾಗಿದೆ.

ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಹಾಗೂ ಆಯುಕ್ತರಾದ ಸಿ.ಎಲ್. ಆನಂದ್ ನಿರ್ದೇಶನದಂತೆ ನಿಯಮ ಮೀರಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಪಾಲಿಕೆಯಲ್ಲಿ ಬಡವರಿಗೆ ಅನ್ಯಾಯ, ಶ್ರೀಮಂತರಿಗೆ ನ್ಯಾಯ ಎಂಬಂತೆ ಆಡಳಿತ ನಡೆಸಲಾಗುತ್ತಿದೆ. ಬೀದಿ ಬದಿ ವ್ಯಾಪಾರ ನಡೆಸುವವರು ಬಡವರಾಗಿದ್ದು, ದಿನಕ್ಕೆ 500-700 ರೂ. ಸಂಪಾದನೆ ಮಾಡುವವರು. ಅವರ ಮೇಲೆ ಆಡಳಿತ ದೌರ್ಜನ್ಯ ನಡೆಸುತ್ತಿದೆ. ಆದರೆ ನಗರದಲ್ಲಿಅದೆಷ್ಟೋ ಬಿಲ್ಡರ್‌ಗಳು ಅತಿಕ್ರಮಣ, ಪಾರ್ಕಿಂಗ್‌ ರಹಿತ ಬಿಲ್ಡಿಂಗ್‌, ಅಂಗಡಿಯವರು ಫುಟ್‌ಪಾತ್‌ ಅತಿಕ್ರಮಣ ಸೇರಿದಂತೆ ನಿಯಮ ಮೀರಿ ವ್ಯವಹಾರ ನಡೆಸುತ್ತಿದ್ದಾರೆ. ಅವರ ವಿರುದ್ಧ ಜೆಸಿಬಿ ಚಲಾಯಿಸುವ ಧೈರ್ಯ ಆಡಳಿತ ನಡೆಸುವವರಿಗೆ, ಅಧಿಕಾರಿಗಳಿಗಿಲ್ಲ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English