ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅನಂತಯಾನ ಪುಸ್ತಕ ಲೋಕಾರ್ಪಣೆ

9:54 PM, Wednesday, September 21st, 2022
Share
1 Star2 Stars3 Stars4 Stars5 Stars
(No Ratings Yet)
Loading...
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು : ದಿವಂಗತ ಅನಂತಕುಮಾರ್‌ ಅವರದ್ದು ಚುಂಬಕ ವ್ಯಕ್ತಿತ್ವ. ಅವರು ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದಂತಹ ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸುತ್ತ ಕಂಕಣಬದ್ದರಾಗಿರಬೇಕು ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಇಂದು ದಿವಂಗತ ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, 1963 ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪಿಯುಸಿ ಫಸ್ಟ್‌ ಇಯರ್‌ನಲ್ಲಿ ಇರುವಾಗ ನನ್ನ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್‌ ಜೊತೆ ಆಗಿದೆ. ಅನಂತಕುಮಾರ್‌ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ಒಡನಾಟ ನೆನೆಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದರು. ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ ಇದೆ. ನಮ್ಮೆಲ್ಲರ ಭಾವನೆಗಳ ಜೊಡಣೆ ಪುಸ್ತಕದಲ್ಲಿ ಆಗಿದೆ. ಅನಂತಕುಮಾರ್‌ ನೆನಪು ಸದಾ ಹಸಿರಾಗಿರಬೇಕು, ಅದಕ್ಕೆ ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳ ಹೆಚ್ಚಾಗಬೇಕು. ಅವರ ನೆನೆಪು ಎಂದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೇರಣೆ ಪಡೆದು ಮುಂದಕ್ಕೆ ಹೋಗುವಂತಹದ್ದು. ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸಲು ಕಂಕಣಬದ್ದರಾಗಿಬೇಕು. ಅವರು ನಮ್ಮೊಂದಿಗೆ ಇಂದು ಇಲ್ಲ, ಅವರು ಮಾಡಿರುವ ಕೆಲಸದ ಮೂಲಕ ಅವರು ಇನ್ನು ನಮ್ಮ ಮಧ್ಯೆ ಇದ್ದಾರೆ. ತೇಜಸ್ವಿನಿ ಅನಂತಕುಮಾರ್‌ ಅವರ ಕ್ರೀಯಾಶೀಲ ಕಾರ್ಯಗಳ ಮೂಲಕ ಇನ್ನು ಜೀವಂತವಾಗಿದ್ದಾರೆ ಎಂದರು.

ಅನಂತಕುಮಾರ್‌ ಅವರ ಹಿಂದಿನ ಶಕ್ತಿಯಾಗಿ ಕಾರ್ಯನಿರ್ವಹಿದ್ದವರು ತೇಜಸ್ವಿನಿ ಅವರು. ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ. ಎಲ್ಲಾ ರಂಗಗಳು ತಮ್ಮ ಆದರ್ಶಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲದ್ದೇವೆ. ಇದರಿಂದ ಹೊರಬಂದು ಒಳ್ಳೆಯ ಆದರ್ಶ ಕಾಣಬೇಕಾದರೆ ಅನಂತಕುಮಾರ್‌ ಅವರಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ. ಲಕ್ಷಾಂತರ ಜನರಲ್ಲಿ ಒಳ್ಳೆಯ ವ್ಯಕ್ತಿತ್ವಕ್ಕೆ ಪ್ರೇರಣೆಯಾದವರು ಅನಂತಕುಮಾರ್‌. ಅವರ ಎಲ್ಲಾ ಚಟುವಟಿಕೆಗಳಿಗೆ ಕೈಜೋಡಿಸಿ ಅನುಷ್ಠಾನಗೊಳಿಸಬೇಕಾಗಿದೆ. ನಾಳಿನ ಕಾರ್ಯಕ್ರಮದಲ್ಲೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್‌, ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಎನ್‌ ಕುಮಾರ್‌, ಪದ್ಮಶ್ರೀ ದೊಡ್ಡರಂಗೇಗೌಡ್ರು, ಕ.ರಾ.ಗ್ರಾ.ಪ ವಿಶ್ವವಿದ್ಯಾಲಯದ ಉಪಕುಲಪತಿ ವಿಷ್ಣುಕಾತ್‌ ಚಟ್ಪಲ್ಲಿ, ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪಿ ವಿ ಕೃಷ್ಣ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಪ್ರದರ್ಶಿನಿಯನ್ನು ಉದ್ಘಾಟಿಸಿದರು.

ನಾಳೆ ಬೆಳಿಗ್ಗೆ 11 ಗಂಟೆಗೆ ಅನಂತ್ ಕುಮಾರ್ ಅವರ ಜೊತೆ ಕೆಲಸ ಮಾಡಿದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಸಂಜೆ 6:00ಗೆ ಸಭಾ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿಎಸ್ ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English