ಮಂಗಳೂರು : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆ.ಎಸ್.ಡಿ.ಸಿ) ಅಧೀನದಲ್ಲಿ ಬರುವ ಅಂತರಾಷ್ಟ್ರೀಯ ವಲಸಿಗರ ಕೇಂದ್ರದ ಮೂಲಕ ಗಲ್ಫ್ ದುಬೈ ದುಬೈ (ಯು.ಎ.ಇ.) ದೇಶದಲ್ಲಿ ಪುರುಷ ನರ್ಸ್ ಹುದ್ದೆಗಳಿಗೆ ಕನಿಷ್ಠ 2 ವರ್ಷ ಅನುಭವವಿರುವ ಆಸಕ್ತ ಅಭ್ಯರ್ಥಿಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ವೇತನದ: ಪ್ರತಿ ತಿಂಗಳಿಗೆ ರೂ. 1,11,000 ವರೆಗೆ. ಕಂಪೆನಿ ವತಿಯಿಂದ ವಸತಿ, ವೈದ್ಯಕೀಯ ವಿಮೆ, ಸಾರಿಗೆ, ವೀಸಾ ಮತ್ತು ಏರ್ ಟಿಕೆಟ್ ಒದಗಿಸಲಾಗುತ್ತದೆ. ಅರ್ಹತೆ: ಬಿ.ಎಸ್ಸಿ ನರ್ಸಿಂಗ್/ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್. ಅರ್ಹ ಅಭ್ಯರ್ಥಿಗಳಿಗೆ 2024 ರ ಆಗಸ್ಟ್ ಮಾಹೆಯಲ್ಲಿ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು hr.imck@gmail.com ಇಮೇಲ್ ಮೂಲಕ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಅಂತರಾಷ್ಟ್ರೀಯ ವಲಸಿಗರ ಕೇಂದ್ರ (IMC-K) ದೂರವಾಣಿ ಸಂಖ್ಯೆ: 9606492213 ಅಥವಾ 9606492214 ಸಂಪರ್ಕಿಸವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English