ದಶದಿನ ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ

9:11 PM, Monday, August 5th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಸಂಸ್ಕೃತ ಭಾರತೀ, ಮಂಗಳೂರು ಇದರ ವತಿಯಿಂದ ನಡೆಸಲಾದ ದಶದಿನ ಸಂಸ್ಕೃತ ಸಂಭಾಷಣಾ ಕಾರ್ಯಕ್ರಮ ಇಂದು ಸಮಾರೋಪಗೊಂಡಿತು.

ನಗರದ ಕೋಡಿಕಲ್ ಜಿ.ಎಸ್.ಬಿ ಸಭಾಭವನದಲ್ಲಿ ನಿರಂತರ ಹತ್ತು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರಾಗಿದ್ದ ಸರಕು ಮತ್ತು ಸೇವಾ ತೆರಿಗೆಯ ಸಹಾಯಕ ಆಯುಕ್ತರಾದ ಶ್ರೀ ಮಧುಸೂದನ ಭಟ್ ಮಾತನಾಡಿ ಸಂಸ್ಕೃತ ಭಾಷೆಯ ಕಲಿಕೆಯಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ವೇದಗಳು, ಪುರಾಣಗಳು, ಉಪನಿಷತ್ತುಗಳು, ರಾಮಾಯಣ ಮಹಾಭಾರತದಂತಹ ಮಹಾ ಗ್ರಂಥಗಳು ಸಂಸ್ಕೃತದಲ್ಲಿ ಇದ್ದು ಅವೇ ನಮ್ಮ ಸಂಪತ್ತು ಎಂದರು. ಹಲವು ಸುಭಾಷಿತಗಳನ್ನು ನಿರರ್ಗಳವಾಗಿ ಹೇಳಿದ ಅವರು ತಮ್ಮ ಜೀವನದಲ್ಲಿ ಸಂಸ್ಕೃತ ಬಹಳಷ್ಟು ಪರಿಣಾಮ ಬೀರಿದ್ದನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಕೋಡಿಕಲ್ ವಾರ್ಡ್ ನ ಕಾರ್ಪೊರೇಟರ್ ಕಿರಣ್ ಕುಮಾರ್ ಮಾತನಾಡಿ, ತಮ್ಮ ಶಾಲಾ ದಿನಗಳಲ್ಲಿ ಹೇಗೆ ಸಂಸ್ಕೃತವು ತಮ್ಮನ್ನು ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದೆ, ಸಂಸ್ಕೃತ ಕಲಿತ ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಉತ್ತಮರಾಗುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಭಾರತೀ ಮಂಗಳೂರು ಇದರ ಅಧ್ಯಕ್ಷರಾಗಿರುವ ಡಾ. ವೇಣುಗೋಪಾಲರವರು ಸಂಸ್ಕೃತ ಭಾಷಾ ಕಲಿಕೆಯ ಮಹತ್ವ ತಿಳಿಸಿ, ವಿದ್ಯಾರ್ಥಿಗಳು ಸಂಭಾಷಣಾ ಶಿಬಿರದಲ್ಲಿ ಭಾಗವಹಿಸಿ ಮುಂದಕ್ಕೆ ಸಂಸ್ಕೃತ ಎಮ್.ಎ. ಮಾಡಲು ಸಲಹೆ ನೀಡಿದರು.

ಶಿಬಿರಾರ್ಥಿಗಳು ಸಂಸ್ಕೃತ ಭಾಷೆಯಲ್ಲೆ ಪ್ರಹಸನ, ಹಾಡು ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು. ಸಹಸಂಯೋಜಕಿಯಾದ ಶ್ರೀಮತಿ ನಿವೇದಿತಾ ಸಂಸ್ಕೃತ ಹಾಡು ಹಾಡಿದರು.

ಕೋಡಿಕಲ್ ಜಿ.ಎಸ್.ಬಿ ಸಭೆಯ ಅಧ್ಯಕ್ಷರಾದ ಶ್ರೀ ಜೋಡುಮಠ ರವಳನಾಥ ಭಟ್, ಶಿಬಿರದ ಶಿಕ್ಷಕರಾದ ಶ್ರೀ ಪಟ್ಣಶೆಟ್ಟಿ ಗಣಪತಿ ಪೈ ಮೂಡುಬಿದಿರೆ, ಸಂಸ್ಕೃತ ಭಾರತೀ ಮಂಗಳೂರು ಇದರ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖರಾದ ಶ್ರೀ ಸತ್ಯನಾರಾಯಣ ಕೆ. ವಿ., ಪ್ರಶಿಕ್ಷಣ ಪ್ರಮುಖರಾದ ಶ್ರೀ ಗಜಾನನ ಬೋವಿಕಾನ, ಸಂಸ್ಕೃತ ಭಾರತಿಯ ಮಂಗಳೂರು ನಗರ ಸಂಯೋಜಕಿಯಾದ ಶ್ರೀಮತಿ ಸಂಧ್ಯಾ ಕಾಮತ್, ಮತ್ತು ಸಂಸ್ಕೃತ ಭಾರತಿಯ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ ರಾಮನಾಥ ಶ್ಯಾನುಭಾಗ್ ಸ್ವಾಗತಿಸಿ, ಶ್ರೀ ಶಿವಾಜಿಯವರು ವಂದಿಸಿದರು. ಶ್ರೀಮತಿ ಜಯಶ್ರೀಯವರು ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English