ಜೋಕಟ್ಟೆ 14 ವರ್ಷದ ಬಾಲಕಿಯ ಕೊಲೆ , ಆರೋಪಿಯನ್ನು ಬಂಧಿಸಿದ ಪೊಲೀಸರು

9:14 PM, Wednesday, August 7th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಜೋಕಟ್ಟೆಯಲ್ಲಿ ಬೆಳಗಾವಿ ಮೂಲದ 14 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಪರಸಘಡ, ಹಂಚಿನಾಳ, ಮಾದರ ಓಣಿ ನಿವಾಸಿ ಪಕ್ಕೀರಪ್ಪ ಹಣಮಪ್ಪ ಮಾದರ (51) ಬಂಧಿತ. ಈತ ಪ್ರಸ್ತುತ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಹಿಂಭಾಗ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಕಳೆದ 6 ತಿಂಗಳುಗಳಿಂದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿದ್ದ.

ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು, ಇವರ ಅಣ್ಣನ ಪುತ್ರಿ ಅಸೈಗೋಳಿಯ ಹಾಸ್ಟೆಲ್‌ನಿಂದ ಶಾಲೆಗೆ ಹೋಗುತ್ತಿದ್ದು ನಾಲ್ಕು ದಿನಗಳ ಹಿಂದೆ ಕೈನೋವು ಇದ್ದುದರಿಂದ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಹನುಮಂತನ ಪರಿಚಯವಿದ್ದ ಹಣಮಪ್ಪ ಮಾದರ ಮನೆಗೆ ಆಗ್ಗಾಗ ಬರುತ್ತಿದ್ದ.

ಆಗಸ್ಟ್ ರಂದು ಮನೆಯಲ್ಲಿದ್ದವರೆಲ್ಲ ಕೆಲಸಕ್ಕೆ ಹೋದ ನಂತರ ಬೆಳಗ್ಗೆ 10.30ರ ಸುಮಾರಿಗೆ ಹಣಮಪ್ಪ ಮಾದರ ಬಾಲಕಿಗೆ ಲೈಂಗಿಕ ಕಿರುಕುಳ ಕೊಡಲು ಮುಂದಾಗಿದ್ದು ಅದನ್ನು ವಿರೋಧಿಸಿದಾಗ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪ್ರಕರಣ ನಡೆದ ದಿನ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಫೋನ್ ಕೊಡಲು ಹೇಳಿದ್ದರು. ಅದರಂತೆ ಪಕ್ಕದ ಮನೆವರು ಬಾಲಕಿ ಇದ್ದ ಬಾಡಿಗೆ ಮನೆಗೆ ಬಂದಾಗ ಕುತ್ತಿಗೆಗೆ ನೇಣು ಬಿಗಿದು ಯಾರೋ ಕೊಲೆ ಮಾಡಿದ ಸ್ಥಿತಿಯಲ್ಲಿ ಬಾಲಕಿಯ ಶವ ಕಂಡು ಬಂದಿತ್ತು. ಇದನ್ನು ಬಾಲಕಿಯ ತಾಯಿಗೆ ಫೋನ್‌ನಲ್ಲಿ ತಿಳಿಸಿದ್ದು, ಅವರು ಹನುಮಂತನಿಗೆ ಬಾಡಿಗೆ ಮನೆಗೆ ತೆರಳುವಂತೆ ತಿಳಿಸಿದ್ದರು. ಮನೆಗೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English