ಮಂಗಳೂರು : ದೇಶವು 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹೊಸ್ತಿಲಲ್ಲಿದ್ದು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿಯವರ ಕರೆಯಂತೆ ನಮ್ಮೆಲ್ಲರ ಮನೆಗಳಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸುವ ಅಭಿಯಾನದಲ್ಲಿ ಪಾಲ್ಗೊಳ್ಳೋಣವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.
ತಮ್ಮ ನಿವಾಸದಲ್ಲಿ ಧ್ವಜವನ್ನು ಕಟ್ಟಿ ಮಾತನಾಡಿದ ಶಾಸಕರು ಆಗಸ್ಟ್ 13 ರಂದು ಆರಂಭವಾಗಿರುವ ಈ ಅಭಿಯಾನ ಆಗಸ್ಟ್ 15ರ ಸಂಜೆ ಕೊನೆಗೊಳ್ಳಲಿದೆ. ದೇಶವನ್ನು ಕಟ್ಟಲು ಅನೇಕ ಮಹನೀಯರು ತಮ್ಮ ಅಮೂಲ್ಯ ಬದುಕನ್ನೇ ಮುಡಿಪಾಗಿಟ್ಟಿದ್ದು ತಾಯಿ ಭಾರತಿಯನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಿಗೊಳಿಸುವ ಹೋರಾಟದಲ್ಲಿ ಕೆಲವರು ಕುಟುಂಬವನ್ನು ಕಳೆದುಕೊಂಡರೆ, ಹಲವರು ಸ್ವತಃ ತಾವೇ ಬಲಿದಾನವಾಗಿ ಹೋದರು. ಅವರಲ್ಲಿದ್ದ ಸ್ವಾತಂತ್ರ್ಯದ ಕಿಚ್ಚು ಶತಶತಮಾನಗಳು ಕಳೆದರೂ ನಮ್ಮ ನಾಡಿನ ತರುಣರಲ್ಲಿ ಮತ್ತೆ ಮತ್ತೆ ಉದ್ದೀಪನಗೊಳ್ಳಬೇಕು ಎಂಬ ಆಶಯದೊಂದಿಗೆ ಪ್ರಧಾನಿಗಳು ಈ ಅಭಿಯಾನ ಆರಂಭಿಸಿದ್ದು ನಾವೆಲ್ಲರೂ ಕೈಜೋಡಿಸೋಣವೆಂದು ಶಾಸಕರು ಮನವಿ ಮಾಡಿದರು
Click this button or press Ctrl+G to toggle between Kannada and English