ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ

12:07 AM, Saturday, August 17th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಾಣಿಲ : ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆಯನ್ನು ಹೆಚ್ಚುತೊಡಗಿಸಿಕೊಳ್ಳುವಂತೆ ಮಾಡಬೇಕು. ಭೂಮಿಯ ಋಣವನ್ನು ಜನ್ಮದಲ್ಲಿ ತೀರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಡಿಕೇರಿ ನ್ಯಾಯಾಧೀಶೆ ರೇಣುಕಾ ಮಾತನಾಡಿ ನಾವು ಮಾಡುವ ಸೇವೆಯಲ್ಲಿ ತೃಪ್ತ್ತಿ ಕಾಣುವ ಕೆಲಸವಾಗಬೇಕು. ಬಡವರ ಕಷ್ಟಕ್ಕೆ ಸ್ಪಂದಿಸುವ ಜತೆಗೆ ತಾಯಿಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದಾ ಸಿದ್ಧವಾಗಿದ್ದೇನೆ. ಇದಕ್ಕೆ ದೇವರ ಅನುಗ್ರಹ ಹಾಗೂ ಸ್ವಾಮೀಜಿಯ ಆಶೀರ್ವಾದ ನಿರಂತರ ಬೇಕಾಗಿದೆ. ಸ್ವಾಮೀಜಿಯವರ ಆಧ್ಯಾತ್ಮ ಶಕ್ತಿಯಿಂದ 20 ವರ್ಷದಲ್ಲಿ ಕ್ಷೇತ್ರ ಬಹಳಷ್ಟು ಪ್ರಗತಿಯಾಗಿದೆ ಎಂದರು.

ಮುಂಬಯಿ ಕಿಟ್ವಾಲ ಭ್ರಾಮರಿ ಆಶ್ರಮದ ಸಾಧು ಸತ್ಯಾಮೃತ ನಂದಿನಿ ಮುಂಬಯಿ ದಿವ್ಯ ಸಾನಿಧ್ಯ ವಹಿಸಿದ್ದರು. ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಕೆ.ಕೆ.ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಶ್ರೀ ಶಾರದಾ ವಿದ್ಯಾಲಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಮೆಸ್ಕಾಂ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ಸರ್ಕಾರದ ನಿವೃತ್ತ ಸಹ ಕಾರ್ಯದರ್ಶಿ ಕೃಷ್ಣಪ್ಪ ಕಣ್ವತೀರ್ಥ, ವಿನಯ ಶೆಟ್ಟಿ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಕ್ಷೇತ್ರದ ಟ್ರಸ್ಟಿ ಚಂದ್ರಶೇಖರ ಕುಲಾಲ್, ತಾಪಂ ಮಾಜಿ ಸದಸ್ಯ ರಾಜೇಂದ್ರನಾಥ ರೈ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷ ವನಿತಾ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರೇಖಾ ಎಸ್. ಕಾಮತ್ ಪ್ರಾರ್ಥಿಸಿದರು. ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಸ್ವಾಗತಿಸಿದರು. ನಳಿನಿ ವಿಶ್ವಕರ್ಮ, ವಸಂತಿ ಸನ್ಮಾನ ಪತ್ರ ವಾಚಿಸಿದರು. ಸಮಿತಿಯ ಕಾರ್ಯದರ್ಶೀ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English