78ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಭಗಿನಿ ಸಮಾಜ ಶಿಶು ನಿಲಯ ಜೆಪ್ಪು ,ಇದರ ಮಕ್ಕಳಿಗೆ ಹಣ್ಣುಗಳ ಹಂಚಿಕೆ

11:07 PM, Monday, August 19th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಭಗಿನಿ ಸಮಾಜ ಶಿಶು ನಿಲಯ ಜೆಪ್ಪು ,ಇದರ ಮಕ್ಕಳಿಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಹೊಸೈಟಿ, ವಲೆನ್ಸಿಯಾ ಶಾಖೆಯ ವತಿಯಿಂದ ಆಗಸ್ಟ್ 17 ರಂದು ಆಯೋಜಿಸಿದ ಸೋಲಾ ಪುರ ಚಾದರ್ ಮತ್ತು ಹಣ್ಣುಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವೆಲೆನ್ಸಿಯಾ ವಾರ್ಡಿನ ಕಾರ್ಪೊರೇಟರ್ ಜೆಸಿಂತಾ ವಿಜಯ್ ಆಲೈಡ್ ರವರು ಸಮಾಜ ಸೇವೆ ಮಾಡುವಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಯಶಸ್ವಿಯಾಗಿದೆ”, ಗಳಿಸಿದ್ದಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೀಡಬೇಕು ಎನ್ನುವ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫೆರ್ನಾಂಡಿಸ್‌ರವರ ಕಲ್ಪನೆಯನ್ನು ಶ್ಲಾಘಿಸಿದರು. ಗೌರವಾನ್ವಿಕ ಅತಿಥಿಯಾದಂತಹ ಜೆಪ್ಪು,ವಾರ್ಡಿನ ಕಾರ್ಪೊರೇಟರ್ ಭಾನುಮತಿ ಮುಂದೆಯೂ ಸಹಕಾರಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯಲಿ

ಎಂದು ಆಶಿಸಿದರು. ಭಗಿನಿ ಸಮಾಜ ಶಿಶು ನಿಲಯ ಜೆಪ್ಪು ಇದರ ಕಾರ್ಯದರ್ಶಿಯವರು ಸಹಕಾರಿಯ ಬೆಳವಣಿಗೆಗೆ ಶುಭಹಾರೈಸಿದರು. ಶಾಖಾ ವ್ಯವಸ್ಥಾಪಕರಾದ ನಾಗಾರ್ಜುನ್, ವಲೆನ್ಸಿಯಾ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲೆನ್ಸಿಯಾ ಶಾಖೆಯ ಸಿಬ್ಬಂದಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಭಗಿನಿ ಸಮಾಜ ಶಿಶು ನಿಲಯ ಜೆಪ್ಪು, ಇದರ ಮಕ್ಕಳಿಗೆ ಅಗತ್ಯವಿದ್ದ ಚಾದರ್ ಹಾಗೂ ಹಣ್ಣುಗಳನ್ನು ವಿತರಿಸಿದರು.ಕಾರ್ಯಕ್ರಮದ ಕೊ ನೆಯಲ್ಲಿ ಮಕ್ಕಳಿಗೆ ಸಂಜೆಯ ತಿಂಡಿ ಹಾಗೂ ಜ್ಯೂಸ್ ನೀಡಲಾಯಿತು. ಶ್ರೀಮತಿ ಸುಷ್ಮಾಸ್ವಾಗತಿಸಿ, ಶ್ರೀಮತಿ ರೀಮಾ ಲೂವಿಸ್ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಕು। ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English