ಮಂಗಳೂರು : ಶ್ರೀ ಮಂಗಳಾದೇವಿ ಸೇವಾ ಸಮಿತಿಯ 55ನೇ ವರ್ಷದ ಗಣೇಶೋತ್ಸವವು ಸೆಪ್ಟೆಂಬರ್ 7ರಿಂದ 9, 2024ರ ವರೆಗೆ ಮೂರು ದಿನಗಳ ಕಾಲ ಡೆಯಲಿದ್ದು , ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರಿಂದ ಗಣಹೋಮ ಹಾಗೂ ಶ್ರೀ ವಿನಾಯಕನ ಪ್ರತಿಷ್ಠೆಯೊಂದಿಗೆ ಶನಿವಾರ ಆರಂಭಗೊಂಡಿತು.
ಬೆಳಿಗ್ಗೆ 9ಗಂಟೆಗೆ 55ನೇ ಸಾರ್ವಜನಿಕ ಗಣೇಶೋತ್ಸವವನ್ನು ಬೋಳಾರ ಶ್ರೀ ಲಕ್ಷ್ಮೀ ಜುವೆಲ್ಲರ್ಸ್ ಮಾಲೀಕರಾದ ಪ್ರವೀಣ್ ಶೇಟ್ ನಾಗ್ವೆಕರ್ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಬೆಳಿಗ್ಗೆ 10
ಗಂಟೆಗೆ ಶ್ರೀಮತಿ ರಾಜೀ ಪ್ರದೀಪ್ ಶಕ್ತಿನಗರ ಮತ್ತು ಬಳಗದವರಿಂದ ತಿರುವಾದಿರ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಮಹಿಳಾ ಸದಸ್ಯೆಯರಿಂದ ಮತ್ತು ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ 5.30ಕ್ಕೆ ಸಭಾಕಾರ್ಯಕ್ರಮ, ಸನ್ಮಾನ, ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಭಾಧ್ಯಕ್ಷತೆಯನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಸೂರ್ಯಕಾಂತ್ ಸುವರ್ಣ ವಹಿಸಿದ್ದರು. ಅತಿಥಿಗಳಾಗಿ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ್ ಎಂ ಐತಾಳ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಕೇಶವ, ಗೌರಿಶಂಕರ್ ಸೀವೇಜ್ ಮಾಲಕ ಹರೀಶ್ ಎನ್. ಯು, ರಾಜಲಕ್ಷ್ಮಿ ಟ್ರಾವೆಲ್ಸ್ ಮಂಗಳಾದೇವಿ ಮಾಲಕ ನರೇಶ್ ಕುಮಾರ್, ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಅಧ್ಯಕ್ಷರಾದ ದಿಲ್ ರಾಜ್ ಆಳ್ವಾ, ಗೌರವಾಧ್ಯಕ್ಷ ಬಿ. ಅಶೋಕ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ಜೊತೆಕಾರ್ಯದರ್ಶಿ ಪ್ರಕಾಶ್ ಜಪ್ಪು ಓಣಿಕೆರೆ ಸ್ಪರ್ಧೆಯ ವಿಜೇತರ ವಿವರಗಳನ್ನು ವಾಚಿಸಿದರು.
ಸಂಜೆ 7 ರಿಂದ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಮಹಿಳಾ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Click this button or press Ctrl+G to toggle between Kannada and English