ಮಂಗಳೂರು : ದ. ಕ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೆಸೀನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿಜಿ ಮಾತನಾಡಿ ಭಾರತದಲ್ಲಿ ಯುವಜನರು ಹೆಚ್ಚು ಆತ್ಮಹತ್ಯೆ ಮಾಡುತ್ತಿರುವುದು ಪ್ರತಿನಿತ್ಯ ವರದಿಯಾಗುತ್ತಿದೆ. ಸಾಮಾಜಿಕ ಜಾಲತಾಣದ ಪ್ರಭಾವ ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿ ಸಮುದಾಯ ಬಲಿಯಾಗುತ್ತಿದೆ, ಪ್ರತಿಯೊಂದು ಮಗುವಿನ ದೈನಂದಿನ ಆಹಾರ ಸೇವನೆಯು ಮೊಬೈಲ್ ಮೂಲಕವೇ ಆಗುತ್ತಿದೆ. ಒತ್ತಡದ ಜೀವನದೊಂದಿಗೆ ತಾಯಂದಿರು ಮಗುವಿಗೆ ಪಾಲನೆ ಘೋಷಣೆಯ ಸಂದರ್ಭದಲ್ಲಿ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕಾಳಜಿ ವಹಿಸಬೇಕು. ಕೇವಲ ಅಂಕಗಳನ್ನು ಪಡೆಯಲು ವಿದ್ಯಾರ್ಥಿ ಮಕ್ಕಳ ಮೇಲೆ ಒತ್ತಡ ಹಾಕಬಾರದು ಪ್ರತಿಯೊಬ್ಬ ಪೆÇೀಷಕರು ಈ ಬಗ್ಗೆ ಚಿಂತನೆಯನ್ನು ಮಾಡಬೇಕು ಯುವ ಜನತೆ ಈ ಬಗ್ಗೆ ಹೆಚ್ಚಿನ ಕಾಲೇಜು ಮಟ್ಟದಲ್ಲಿ ಮೂಡಿಸಲು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್‍ಆರ್ ತಿಮ್ಮಯ್ಯ ಮಾತನಾಡಿ ಆತ್ಮಹತ್ಯೆಯ ಮನಸ್ಥಿತಿ ಬಾರದ ರೀತಿಯಲ್ಲಿ ಒತ್ತಡವನ್ನು ನಿವಾರಿಸಿಕೊಂಡು ಮುಕ್ತವಾಗಿ ಮಾತುಕತೆಯ ಮೂಲಕ ಉತ್ತಮವಾದ ವ್ಯಕ್ತಿತ್ವವನ್ನು ನಿರೂಪಿಸಬಹುದು.ಜೀವನದಲ್ಲಿ ಉತ್ತಮ ಸಾಧನೆ ಎಂದರೆ ಉಸಿರು ಇರುವ ತನಕ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕು. ನಮ್ಮ ಉಸಿರು ನಿಂತ ಮೇಲೆ ನಮ್ಮ ಹೆಸರು ಮಾತ್ರ ಶಾಶ್ವತ ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಜಾಗೃತಿಯನ್ನು ಮೂಡಿಸಬೇಕು, ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ವಿವರಿಸುವ ಜನರೊಂದಿಗೆ ಆರೈಕೆ ಮತ್ತು ಮಾನಸಿಕ ಬೆಂಬಲ ನೀಡಬೇಕು ಎಂದರು.
ರೆ. ಫಾದರ್ ರಿಚರ್ಡ್ ಅಲೋಸಿಯಸ್ ಕೊಹಿಲೊ ಮಾತನಾಡಿ ವಿಶ್ವದಾದ್ಯಂತ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಯಿಂದ ಸಾಯುತ್ತಾನೆ ದೈನಂದಿನ ಜೀವನ ಪದ್ಧತಿಯಲ್ಲಿ ಸಂಘರ್ಷ ಪೂರೈಸದ ಅಗತ್ಯಗಳು ಕೌಟುಂಬಿಕ ಭಿನ್ನಾಭಿಪ್ರಾಯ ಇನ್ನಿತರ ಅಂಶಗಳು ಆತ್ಮಹತ್ಯೆಗೆ ಕಾರಣವಾಗುತ್ತಿದೆ ಇದನ್ನು ಸರಿಪಡಿಸಬೇಕಾದರೆ ಸಮಾಜದಲ್ಲಿ ಅರಿವು ಜಾಗೃತಿ ತಿಳುವಳಿಕೆ ಮೂಡಿಸುವುದು ಅತ್ಯಗತ್ಯ ಎಂದರು.
ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ. ಸುದರ್ಶನ್, ಮಾನಸಿಕ ಆರೋಗ್ಯ ತಜ್ಞರಾದ ಡಾ. ಪ್ರಜಕ್ತ ರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಉಪಸ್ಥಿತರಿದ್ದರು.
ಡಾ. ಸುಪ್ರಿಯಾ ಹೆಗಡೆ ಸ್ವಾಗತಿಸಿದರು. ಡಾ. ರಾಹುಲ್ ರಾವ್ ವಂದಿಸಿದರು.
Click this button or press Ctrl+G to toggle between Kannada and English