ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

5:45 PM, Tuesday, January 22nd, 2013
Share
1 Star2 Stars3 Stars4 Stars5 Stars
(No Ratings Yet)
Loading...

preparation of Republic Dayಮಂಗಳೂರು : ದೇಶದ ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ದೇಶದೆಲ್ಲೆಡೆ ತಯಾರಿ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕೇಂದ್ರ ಭಾಗವಾದ ನೆಹರೂ ಮೈದಾನದಲ್ಲಿ ತಯಾರಿ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 5000 ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮದ ಸಂದೇಶ ಸಾರಲು ತಮ್ಮ ತಯಾರಿ ನಡೆಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ 5000 ವಿದ್ಯಾರ್ಥಿನಿಯರು ದೇಶ ಭಕ್ತಿಯ ಸಂದೇಶ ಸಾರುವ ಕನ್ನಡ, ಹಿಂದಿ, ಸಂಸ್ಕ್ರತ, ತಮಿಳು ಹಾಗೂ ತೆಲುಗು ಭಾಷೆಯ ಹಾಡುಗಳಿಗೆ ನೃತ್ಯದೊಂದಿಗೆ ವಿವಿಧ ಕವಾಯತುಗಳನ್ನು ಮಾಡಿ ನೆರೆದವರನ್ನು ರಂಜಿಸಲಿದ್ದಾರೆ. ಇದರ ನೇತೃತ್ವವನ್ನು ಮಂಗಳೂರಿನ ಡಿಡಿಪಿಐ ಮೊಸೆಸ್ ಜಯಶೇಖರ್ ವಹಿಸಿದ್ದು, ಕೊಳ್ಳೇಗಾಲದ ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಎಂಬುವವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. 10 ಶಾಲೆಗಳ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಹಾಡಿಗೆ ನೃತ್ಯದ ಜತೆಗೆ ಕವಾಯತು ಪ್ರದರ್ಶಿಸಿದರೆ ಉಳಿದ 13 ಶಾಲೆಗಳ ವಿದ್ಯಾರ್ಥಿಗಳು ಹಿನ್ನೆಲೆಯಲ್ಲಿ ಹಾಡಿನ ಪ್ರದರ್ಶನ ನೀಡಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English