ಕೇವಲ 100 ರೂಪಾಯಿಗೆ ಗೆಳೆಯನನ್ನೇ ಕೊಂದ ಸ್ನೇಹಿತರು

5:56 PM, Saturday, September 14th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಹಾಸನ : ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಗಣೇಶ್ (27) ಎಂಬವರನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ. ಕೇವಲ 100 ರೂಪಾಯಿ ಕೊಟ್ಟಿಲ್ಲವೆಂಬ ಕಾರಣಕ್ಕೆ ಮದ್ಯಪಾನದ ಅಮಲಿನಲ್ಲಿ ಸ್ನೇಹಿತರೇ ಆತನನ್ನು ಹತ್ಯೆ ಮಾಡಿದ್ದಾರೆ.

ಗಣೇಶ್ ಗ್ರಾಮ ಪಂಚಾಯ್ತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಾ ಮನೆಗೆ ಆಸರೆಯಾಗಿದ್ದ. ಹೇಳಿ ಕೇಳಿ ಬೆಳಿಗ್ಗೆಯೇ ಕೊಳಾಯಿಗೆ ನೀರು ಬಿಡುವ ಕೆಲಸ ಮುಗಿಯುತ್ತಿದ್ದರಿಂದ ಸಂಜೆಯಾಗುತ್ತಲೇ ಸ್ನೇಹಿತರ ಜೊತೆ ಸೇರುವ ಅಭ್ಯಾಸ ಇರಿಸಿಕೊಂಡಿದ್ದ. ಶುಕ್ರವಾರ ಕೂಡ ಸಂಜೆ ಬೇಗನೆ ಕೆಲಸ ಮುಗಿಸಿ ಗೆಳೆಯರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದ. ಪಾರ್ಟಿಯೆಲ್ಲ ಮಗಿದ ಬಳಿಕ ಗಣೇಶ್​​ನ ಗೆಳೆಯ ರಘು ನೂರು ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ್ದ ಗಣೇಶ್, ‘‘ಪದೇ ಪದೆ ಹಣ ಯಾಕೆ ಕೇಳುತ್ತೀಯಾ? ನನ್ ಹತ್ರ ದುಡ್ಡಿಲ್ಲ ಹೋಗು’’ ಎಂದು ಹೇಳಿದ್ದಕ್ಕೆ ಸಿಟ್ಟಾಗಿದ್ದ ರಘು ತನ್ನ ನಟೋರಿಯಸ್ ಗೆಳೆಯ ಮಧು ಎಂಬುವವನಿಗೆ ವಿಚಾರ ತಿಳಿಸಿದ್ದ. ಮೊದಲೇ ಕುಡಿದ ಅಮಲಿನಲ್ಲಿದ್ದ ಮಧು ಏಕಾಏಕಿ ಗಣೇಶ್ ಮೇಲೆ ಎಗರಿಬಿದ್ದಿದ್ದಾನೆ. ನನ್ನ ದೋಸ್ತನಿಗೆ ಹಣ ಕೊಡುವುದಿಲ್ಲ ಎನ್ನುತ್ತೀಯಾ ಎಂದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಗಣೇಶ್ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದೆ ಹಿಂಬಾಲಿಸಿ ಬಂದ ಪಾಪಿಗಳು ಇರಿದು ಕೊಂದು ಪರಾರಿಯಾಗಿದ್ದಾರೆ.

ಗಣೇಶ್​​ನನ್ನು ಅಟ್ಟಾಡಿಸಿಕೊಂಡು ಹೋದ ರಘು ಮತ್ತು ಮಧು ರಸ್ತೆ ಬದಿಯಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದೀಗ ಮನೆ ಮಗನನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟಿದ್ದು ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ

ಬೇಲೂರು ತಾಲ್ಲೂಕಿನ ಕುಂಬಾರಹಳ್ಳಿ ಗಣೇಶ್ ಕಳೆದ ಒಂದು ವರ್ಷದಿಂದ ಚೀಕನಹಳ್ಳಿಯ ಗ್ರಾಮಪಂಚಾಯ್ತಿಯಲ್ಲಿ ನೀರುಗಂಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ, ಬೆಳಿಗ್ಗೆ ಐದು ಗಂಟೆಗೆಲ್ಲಾ ಎದ್ದು ಬೇಗನೆ ಕೆಲಸ ಮುಗಿಸಿದರೆ ಬಹುತೇಕ ಸಮಯ ಹಾಯಾಗಿ ಇರುತ್ತಿದ್ದ. ಸ್ನೇಹಿತರ ಜೊತೆ ಬೆರೆಯುತ್ತಿದ್ದ. ಚೀಕನಹಳ್ಳಿಯ ಆಟೋ ನಿಲ್ದಾಣದ ಬಳಿ ಇರ್ತಿದ್ದ ರಘು ಜೊತೆಗೆ ಗಳೆತನ ಹೊಂದಿದ್ದ ಗಣೇಶ್ ಆಗಾಗ ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದ ಎನ್ನಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English