ಮಂಗಳೂರು : ಶ್ರೀ ಲಕ್ಷ್ಮಣಾನಂದವಿವಿಧೋದ್ದೇಶ ಸಹಕಾರ ಸಂಘವು ತನ್ನ ಸದಸ್ಯರೆಲ್ಲರ ಸಂಪೂರ್ಣ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2023-24ನೇ ಸಾಲಿನಲ್ಲಿ ರೂ 1,49,64,955 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 20 ಡಿವಿಡೆಂಡ್ ಎಂದು ಸಂಘದ ಅಧ್ಯಕ್ಷರಾದ ಜೆ. ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ.
ಮೋರ್ಗನ್ಸ್ಗೇಟ್ ಜೆಪ್ಪುವಿನ ರಾಮಕ್ಷತ್ರಿಯ ಮಂದಿರದಲ್ಲಿ ದಿನಾಂಕ 15.09.2024ನೇ ಆದಿತ್ಯವಾರ ಅಪರಾಹ್ನ ಗಂಟೆ 4.00ಕ್ಕೆ 27ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಸಂಘ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಿಯೂ ಅಧಿಕ ಲಾಭ ಗಳಿಸಿದೆ. ಸಂಘದಲ್ಲಿ 5971 ಸದಸ್ಯರಿದ್ದು, ರೂ. 2,09,55,260.00 ಪಾಲು ಬಂಡವಾಳ ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲೂ ಸಂಘವು ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷಾಂತ್ಯಕ್ಕೆ ಠೇವಣಿ ರೂ. 80,72,31,994.19 ನಿಂದ ವರದಿ ವರ್ಷದಲ್ಲಿ ರೂ. 88,73,03,990.16ಗೆ ಏರಿಕೆಯಾಗಿದೆ. ಸಾಲ ಮುಂಗಡದಲ್ಲೂ ರೂ. 78,80,70,333.00 ನಿಂದ ರೂ. 86,97,86,156.00 ರೂ. ಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ ರೂ. 3,89,96,90,561.91 ಆಗಿದೆ ಎಂದು ಶ್ರೀ ಜೆ. ಕೃಷ್ಣ ಪಾಲೆಮಾರ್ ತಿಳಿಸಿದರು.
ಸಂಘದ ಸ್ವಂತ ಆಡಳಿತ ಕಚೇರಿಯನ್ನು ತೆರೆಯಲಾಗಿದ್ದು, ಗ್ರಾಹಕರ ಸೌಲಭ್ಯಕ್ಕೆ ಪ್ರಧಾನ ಕಚೇರಿಯಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನ ಎ.ಟಿ.ಎಂ ಕೂಡ ಇದ್ದು, ಸಂಘದ ವೆಬ್‌ಸೈಟ್ ಹಾಗೂ ಸಹಕಾರಿ ಆ್ಯಪ್‌ನ್ನು ಅಳವಡಿಸಲಾಗಿದ್ದು, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದರು.
ಎಲ್ಲಾ ಸದಸ್ಯರು ಸಂಘದ ಅಭಿವೃದ್ಧಿಗೆ ಉತ್ತಮ ಮಾರ್ಗದರ್ಶನವಿತ್ತರು. ಸಂಘವು ಅಂತರ್ ಜಿಲ್ಲಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಖೆ ತೆರೆಯಲು ಯೋಜನೆ ಹಮ್ಮಿಕೊಂಡಿದೆ. ಸದ್ಯದಲ್ಲೇ ಪುತ್ತೂರಿನಲ್ಲಿ ಶಾಖೆ ತೆರೆಯಲಿದೆ. ಸತತ 4ನೇ ಬಾರಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿ ಪಡೆದಿದೆ. ಸಂಘದ ಉಪಾಧ್ಯಕ್ಷ ಶ್ರೀ ದಿನೇಶ್‌ರಾವ್ ನಿರ್ದೇಶಕರಾದ ಶ್ರೀ ರಾಮಚಂದ್ರ ಕೆ.ಎಸ್, ಶ್ರೀ ಎ. ಬಾಬು, ಶ್ರೀ ರಂಜನ್ ಕೆ.ಎಸ್, ಶ್ರೀಮತಿ ವಾರಿಜ ಕೆ, ಡಾ| ಮಂಜುಳಾ ಎ ರಾವ್, ಶ್ರೀ ಕೆ. ರವೀಂದ್ರ, ಶ್ರೀ ಜೈರಾಜ್ ಉಪಸ್ಥಿತರಿದ್ದರು.
ಸಂಘದ ಆಡಳಿತ ನಿರ್ದೇಶಕ ಶ್ರೀ ಚಂದನ್ ಕೋಟೆಕಾರ್ ಉಪಸ್ಥಿತರಿದ್ದು, ಪ್ರಭಾರ ಸಿ ಇ ಒ ಶ್ರೀ ಸಂದೇಶ್ ಎನ್. ವರದಿ ಲೆಕ್ಕ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ದಿನೇಶ್ ರಾವ್ ಸ್ವಾಗತಿಸಿ, ನಿರ್ದೇಶಕರಾದ ಶ್ರೀ ರಂಜನ್ ಕೆ.ಎಸ್. ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.
Click this button or press Ctrl+G to toggle between Kannada and English