ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ 22 ವರ್ಷದ ಮಹಿಳೆ ನಾಪತ್ತೆ

10:18 PM, Thursday, September 19th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮುಡಿಪಿನಲ್ಲಿರುವ ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ 4 ವರ್ಷಗಳ ಹಿಂದೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22 ವರ್ಷ) ಎಂಬ ಮಹಿಳೆ ಕಾಣೆಯಾಗಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜುಲೇಖಾ ಖಾಟೂನ್ 2024 ನೇ ಮಾರ್ಚ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಆಕೆ ಹೊಂದಿಕೊಳ್ಳಲು ಆಗದೇ ಇರುವುದರಿಂದ ಏಪ್ರೀಲ್ 18 ನೇ ತಾರೀಖು ಕಾಣೆಯಾಗಿದ್ದು ಬಳಿಕ ಆಕೆಯನ್ನು ಮಂಗಳೂರು ಸೇಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾದರ ಗೃಹದಲ್ಲಿ ಇದ್ದು, ಅಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಇರುತ್ತಾಳೆ. ಸದ್ರಿ ಕೇಂದ್ರದಲ್ಲಿರುವ 4 ಮಕ್ಕಳನ್ನು ಕುರ್ನಾಡು ಅಂಗನವಾಡಿಗೆ ಬಿಟ್ಟು ಕರೆದುಕೊಂಡು ಬರಲು ಆಕೆಯೇ ಹೋಗಿ ಬರುತ್ತಿದ್ದು, ಎಂದಿನಂತೆ ಈ ದಿನ ದಿನಾಂಕ 19.09.2024 ರಂದು ಮಧ್ಯಾಹ್ನ 2.45 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಬರಲು ಅಂಗನವಾಡಿಗೆ ಹೋದವಳು ಸುಮಾರು ½ ಗಂಟೆಯಾದರೂ ವಾಪಸು ಬಾರದೇ ಇದ್ದುದರಿಂದ ಅಂಗನವಾಡಿ ಟೀಚರ್ ನಲ್ಲಿ ವಿಚಾರಿಸಲಾಗಿ ಮಕ್ಕಳು ಅಂಗನವಾಡಿಯಲ್ಲಿಯೇ ಇದ್ದು ಕರೆದುಕೊಂಡು ಹೋಗಲು ಜುಲೇಖಾ ಕಾಟೂನ್ ಬಂದಿರುವುದಿಲ್ಲವಾಗಿ ಹೇಳಿರುತ್ತಾರೆ.

ಬಳಿಕ ಮುಡಿಪು ಪ್ರಜ್ಞಾ ಸ್ವಾದರ ಸಂಸ್ಥೆಯ ಮುಖ್ಯಸ್ಥರು ಮತ್ತು ಆಪ್ತ ಸಮಾಲೋಚಕಿಯವರ ಜೊತೆ ಸದ್ರಿ ಸಂಸ್ಥೆಯ ಸುತ್ತಮುತ್ತ ಮತ್ತು ಮುಡಿಪು ಜಂಕ್ಷನ್ ಕಡೆಗಳಲ್ಲಿ ಹುಡುಕಾಡಿದ್ದು ಈ ತನಕ ಪತ್ತೆಯಾಗದೇ ಇರುವುದರಿಂದ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 109/2024, ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English