ಮಡ್ತಿಲದಲ್ಲಿ ನನ್ನ ಹಾಡು ನನ್ನದು ಕರೋಕೆ ಸಂಗೀತ ಸ್ಪರ್ಧೆ

7:07 PM, Thursday, September 26th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಸುಳ್ಯ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಗೌಡರ ಸ್ಮಾರಕ ರಂಗಮಂದಿರದಲ್ಲಿ ನನ್ನ ಹಾಡು ನನ್ನದು ಕರೋಕೆ ಸಂಗೀತ ಸ್ಪರ್ಧೆಯ ಕಾರ್ಯಕ್ರಮವು ಜರಗಿತು.

ಮಂಗಳೂರು ನಗರದ ಸೌತ್ ಟ್ರಾಫಿಕ್ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯರಾಜ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ತರಬೇತಿ ಕದ್ರಿ ಮಂಗಳೂರು ಸಂಸ್ಥೆಯ ಶ್ರೀಮತಿ ಜ್ಯೋತಿ ಲಕ್ಷ್ಮಿ ಅವರು ವಹಿಸಿದ್ದರು.

ಸುಳ್ಯದ ತಮಿಳು ಕಲಾವಿದರ ವೇದಿಕೆಯ ಅಧ್ಯಕ್ಷರಾದ ಎಸ್ ಕನ್ನದಾಸನ್ ಕುಕ್ಕಂದೂರು ಹಾಗೂ ಖ್ಯಾತ ಗಾಯಕರು ಮತ್ತು ಸಬ್ ಇನ್ಸ್ಪೆಕ್ಟರ್ ಆದ ಸುಬ್ರಾಯ ಕಲ್ಪನೆ, ಗಾಯಕರಾದ ದೇವದಾಸ್ ಪೊನ್ವಳ್ಳಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಚಿತೇಶ್ ಸಂಗೀತ ಬಳಗದ ಸಂಚಾಲಕರಾದ ಪೆರುಮಾಳ್ ಲಕ್ಷ್ಮಣ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.ಬಾಲ ಪ್ರತಿಭೆ ಕು. ಶ್ರೇಯಾ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.ಗಾಯಕಿ ಪುಷ್ಪಾವತಿ ಎಡಮಂಗಲ ರವರು ಅಭಿನಂದನಾ ಕೋರಿದರು.

ಈ ಸ್ಪರ್ಧೆಯಲ್ಲಿ ಒಟ್ಟು 27 ಜನ ಗಾಯಕರು ಭಾಗವಹಿಸಿ,ಹೆಸರಾಂತ ಗಾಯಕರದ ಮಿಥುನ್ ರಾಜ್ ವಿದ್ಯಾಪುರ ಮತ್ತು ಪದ್ಮನಾಭ ಚಾರ್ವಾಕ ರವರು ಸ್ಪರ್ಧೆಯ ನಿರ್ಣಾಯಕ ರಾಗಿದ್ದರು.ಈ ಸ್ಪರ್ಧೆಯಲ್ಲಿ ಪ್ರಥಮ – ಹರಿಪ್ರಸಾದ್ ಸುರತ್ಕಲ್, ದ್ವಿತೀಯ – ಅಖಿಲ ನೆಕ್ರಾಜೆ, ತೃತೀಯ – ಲಾವಣ್ಯ ಉಜಿರೆ ಬಹುಮಾನ ಪಡೆದರು.ಕಿರಿಯ ವಿಭಾಗದಲ್ಲಿ ಪ್ರಥಮ – ತನ್ಮಯ್ ಸೋಮಯಾಗಿ ,ದ್ವಿತೀಯ- ದೃತಿ, ತೃತೀಯ – ಶ್ರೇಯ ರವರು ಬಹುಮಾನ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಶಕ್ತಿ ಸಂಘ ಐವರ್ನಾಡು ಇದರ ಗೌರವಾಧ್ಯಕ್ಷರಾದ ದಿನೇಶ್ ಮಡ್ತಿಲ ರವರು ವಹಿಸಿದ್ದರು. ಜ್ಯೋತಿಷಿ ಸಾಹಿತಿ ಮತ್ತು ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ರವರು ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು.

ಆಹ್ವಾನಿತ ಹಲವು ಗಾಯಕರಿಂದ ಗಾಯನ ಕಾರ್ಯಕ್ರಮ ಕೂಡ ನಡೆಯಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇದರ ವಿದ್ಯಾರ್ಥಿನಿಯರಾದ ತನ್ವಿ ಮತ್ತು ದೃತಿ ಪ್ರಾರ್ಥನೆ ಹಾಡಿದರು. ಜ್ಯೋತಿ ಲಕ್ಷ್ಮಿ ಅವರು ವಂದನಾರ್ಪಣೆ ಮಾಡಿದರು. ಐವರ್ನಾಡು ಯುವಶಕ್ತಿ ಸಂಘ ಇದರ ಅಧ್ಯಕ್ಷ ನವೀನ್ ಬಾಂಜಿಕೋಡಿ ಮತ್ತು ರಮೇಶ್ ಮೇದಿನಡ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English