ಮಂಗಳೂರು ದಸರಾದಲ್ಲಿ ಗಮನಸೆಳೆದ ಪಿಲಿ ಅಜನೆ

3:09 PM, Tuesday, October 15th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ದಸರಾ ಸಂಭ್ರಮಾಚರಣೆ ಪ್ರಯುಕ್ತ ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ‘ಪಿಲಿ ಅಜನೆ’ ಕಾರ್ಯಕ್ರಮವು ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ರವಿರಾಜ್ ಚೌಟ ಸಹಭಾಗಿತ್ವದಲ್ಲಿ ಮಂಗಳೂರಿನ MG ರಸ್ತೆಯಲ್ಲಿರುವ ಹೊಟೇಲ್ ದೀಪಾ ಕಂಫರ್ಟ್ಸ್ ನ ಹತ್ತಿರ ನಡೆಯಿತು. ಎಬಿವಿಪಿ ಪ್ರಮುಖ, ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಬಂಗೇರಾ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ವೀಣಾ ರೊಬರ್ಟ್ ರೆಗೊ, ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು, ದೀಪಾ ಕಂಫರ್ಟ್ ನ ರಯೇಶ್, ರಕ್ಷಿತ್ ಶೆಟ್ಟಿ, ಮಂಜಯ್ಯ ಚಾವಡಿ, ಜಗದೀಶ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಹಾಗೂ ಟೀಮ್ ಕರಾವಳಿ ಬಾಬುಗುಡ್ಡೆ ಹುಲಿವೇಷ ತಂಡದ ಸಾಹಸಮಯ ಹುಲಿ ಕುಣಿತ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಅಲ್ಲದೆ ಕುಮಾರಿ ಪ್ರಣವಿ ಎಮ್. ಅಮೀನ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಶ್ರೀ ಭ್ರಾಮರಿ ತಂಡದ ಚೆಂಡೆ ಮತ್ತು ವಯೋಲಿನ್ ಪ್ರದರ್ಶನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ದೀಪಕ್ ಅಡ್ಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ.ಆರ್ ಶೆಟ್ಟಿ ಅಡ್ಯಾರ್ ಪದವು ಗಣ್ಯರನ್ನು ಸ್ವಾಗತಿಸಿದರು, ಕಾರ್ತಿಕ್, ಹಿತೇಶ್ ಬೇಕಲ್, ಜಯೇಶ್, ಆಶೀಶ್, ರಕ್ಷಿತ್ , ವಂಶಿ ಶೆಟ್ಟಿ , ಹರ್ಷಿತ್ , ಕಿರಣ್ ಮತ್ತು ಭೂಮಿಕ ಸಾಲಿಯಾನ್, ದೀಕ್ಷಿತಾ ಹಾಗೂ ಪಿಲಿಯ ಅಜನೆ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English