ನೆಲ್ಲಿತೀರ್ಥ ಗುಹಾಲಯದಲ್ಲಿ ಅಕ್ಟೊಬರ್ 17 ರಂದು ಗುಹಾ ಪ್ರವೇಶ ಆರಂಭ

9:12 PM, Wednesday, October 16th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕರ್ನಾಟಕದ ಅತಿದೊಡ್ಡ ಗುಹಾ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಅಕ್ಟೊಬರ್ 17 ನಡೆಯುವ ಗುಹಾ ಪ್ರವೇಶದ ಬಗ್ಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.

ಪ್ರತಿ ವರ್ಷ ತುಲಾ ಸಂಕ್ರಮಣದ ಶುಭ ದಿನದಿಂದ ‘ಮೇಷ ಸಂಕ್ರಮಣ’ದವರೆಗೆ ನೆಲ್ಲಿತೀರ್ಥ ಗುಹೆಗೆ ಪ್ರವೇಶಿಸಲು ಮತ್ತು ‘ತೀರ್ಥ ಸ್ನಾನ’ ಮಾಡಲು ಜನರಿಗೆ ಅವಕಾಶವಿದೆ. ಈ ವರ್ಷದ, ಸಮಾರಂಭವು 2024 ರ ಅಕ್ಟೋಬರ್ 17 ರಿಂದ ಪ್ರಾರಂಭವಾಗುತ್ತದೆ ಎಂದು ಹರಿಕೃಷ್ಣ ಪುನರೂರು ಅವರು ಹೇಳಿದರು.

ಮಂಗಳೂರು ನಗರದಿಂದ 30 ಕಿ.ಮೀ ದೂರ ಕೊಂಪದವು ಗ್ರಾಮದ ನೀರುಡೆಯಲ್ಲಿ ಶ್ರೀ ಕ್ಷೇತ್ರ ನೆಲ್ಲಿತೀರ್ಥವಿದೆ. ಸಾಮಾನ್ಯವಾಗಿ ಅಕ್ಟೋಬರ್ 17 ರಿಂದ ಏಪ್ರಿಲ್ 14 ರವರೆಗೆ ಭಕ್ತರಿಗೆ ಗುಹೆಗೆ ಪ್ರವೇಶಿಸಲು ಮತ್ತು ‘ತೀರ್ಥ ಸ್ನಾನ’ ಮಾಡಲು ಭಕ್ತರಿಗೆ ಅವಕಾಶವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಪ್ರದೀಪ್‌ ಕುಮಾರ್‌ ಕಲ್ಕೂರ ಹಾಗೂ ಶ್ರೀ ಭುವನಾಭಿರಮ ಉಡುಪರು ಗುಹೆ ಹಾಗೂ ಕ್ಷೇತ್ರದ ಪೌರಾಣಿಕ ಮಹತ್ಮೆಯನ್ನು ವಿವರಿಸಿ, ಭಕ್ತರು ಈ ಗುಹಾ ಸ್ನಾನ ಹಾಗೂ ಅದರಿಂದ ಒದಗುವ ಮಾನಸಿಕ, ಬೌದ್ದಿಕ ಹಾಗೂ ಆರೋಗ್ಯದ ಲಾಭವನ್ನು ವಿವರಿಸಿದರು. ನಾಳೆ ನಡೆಯುವ ಗುಹಾಪ್ರವೇಶವನ್ನು ಗಂಟೆ 9.30 ಕ್ಕೆ ಚಿತ್ರಾಪುರ ಮಠದ ಶ್ರೀಗಳಾದ ವಿದ್ಯೇಂದ್ರ ತೀರ್ಥ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ತೀರ್ಥ ಸ್ನಾನವು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ತೀರ್ಥ ಸ್ನಾನದ ಅವಕಾಶ ಇದೆಯೆಂದು ಕ್ಷೇತ್ರದ ಸಮಿತಿಯ ಸದಸ್ಯರಾದ ಶ್ರೀ ಪ್ರಸನ್ನ ಭಟ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀ ಎನ್.ವೆಂಕಟರಾಜ್ ಭಟ್, ಹಾಗೂ ದೀಪ್ ಕಿರಣ್ ಕರಂಬಾರ್, ಅವರು ಉಪಸ್ಥಿತರಿದ್ದರು, ಎನ್.ವಿ.ಜಿ.ಕೆ. ಭಟ್ ರವರು ಸ್ವಾಗತ ಕೋರಿ ವಂದನಾರ್ಪಣೆ ಮಾಡಿದರು.

ಶ್ರೀ ಕ್ಷೇತ್ರ ನೆಲ್ಲಿತೀರ್ಥ ದೇವಾಲಯದ ಪಕ್ಕದಲ್ಲಿ ಸುಂದರವಾದ ಗುಹೆ ಇದೆ. ಅದರೊಳಗೆ ‘ನೆಲ್ಲಿತೀರ್ಥ’ ಎಂಬ ಪವಿತ್ರ ಕೊಳ ಮತ್ತು ‘ಜಾಬಾಲೇಶ್ವರ ‘ ಎಂಬ ಶಿವಲಿಂಗವಿದೆ. ಜನರು ಗುಹೆಯನ್ನು ಪ್ರವೇಶಿಸಿ ಪವಿತ್ರ ತೀರ್ಥ ಸ್ನಾನ ಮಾಡಲು ಸುಮಾರು 200 ಮೀಟರ್ ಒಳಗೆ ಮುಂದುವರಿಯುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English