ಬೆಳ್ತಂಗಡಿ : ಸಂತ ತೆರೆಸಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿ ಗಾಯಗೊಳಿಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲಾಗದ ವಿದ್ಯಾರ್ಥಿಗೆ ಪಂಚಾಯತ್ ಸಿಬ್ಬಂದಿ ರಕ್ಷಣೆ ನೀಡಿ ಹಾರೈಕೆ ಮಾಡಿದ್ದಾರೆ.
ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿತ್ತು. ಜೊತೆಗೆ ಹಲವು ಜನರ ಮೇಲೆ ದಾಳಿ ಮಾಡಿದಾಗ , ಜನ ಭಯದಿಂದ ಓಡಿ ಹೋದರು. ಸುತ್ತಲಿನ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.
ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ರಕ್ಷಣೆಗೆ ಯಾರೂ ಇಲ್ಲದಾಗ ಕೊನೆಯ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರರಿಯನ್ ಚಂದ್ರಾವತಿ ಯೊಗೀಶ್ ಪೂಜಾರಿ ಗೇರುಕಟ್ಟೆ ಬಂದು ಮುಚ್ಚಿದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರೆಸಿಕೊಂಡು ಹೊದರು. ಆದರೂ ಬೆನ್ನು ಬಿಡದ ಹೆಜ್ಜೇನು ಆಗಲೂ ದಾಳಿ ನಡೆಸಿದೆ ಎನ್ನಲಾಗಿದೆ.
ವಿದ್ಯಾರ್ಥಿಯನ್ನು ಅಧ್ಯಕ್ಷರ ಕೊಠಡಿಯ ಒಳಗೆ ಹಾಕಿ ಬಾಗಿಲು ಮುಚ್ಚಿದಾಗ ಅಲ್ಲಿಯೂ ಹೆಜ್ಜೇನು ಬಂದಿತ್ತು. ಆವಾಗ ಚಂದ್ರಮತಿಯು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.
ಬಳಿಕ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಪಂಚಾಯತ್ ಸಿಬ್ಬಂದಿಯ ಸಮಯ ಪ್ರಜ್ಞೆ ಗ್ರಾಮಸ್ಥರ ಪ್ರಿತಿಗೆ ಪಾತ್ರವಾಯಿತು.
Click this button or press Ctrl+G to toggle between Kannada and English