ಮಹಾಲಕ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ನಲ್ಲಿ 28.26 ಕೋಟಿ ರೂ. ಅವ್ಯವಹಾರ

8:48 PM, Tuesday, October 29th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಡುಪಿ : ಮಹಾಲಕ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಇದರ ಮಲ್ಪೆ ಶಾಖೆಯಲ್ಲಿ ಸುಮಾರು 1413 ಮಂದಿ ಗ್ರಾಹಕರಿಗೆ ತಲಾ ರೂ. 20 ಸಾವಿರದಂತೆ ಸಾಲ ನೀಡಿ ನಕಲಿ ದಾಖಲೆ ಸೃಷ್ಟಿಸಿ ಅದನ್ನು ತಲಾ ರೂ. 2.00 ಲಕ್ಷ ಸಾಲ ನೀಡಿದಂತೆ ದಾಖಲಿಸಿ ಒಟ್ಟು ರೂ. 28.26 ಕೋಟಿ ಮೊತ್ತ ಪಡೆದು ಅಕ್ರಮ ನಡೆಸಿ ಸದರಿ ಮೊತ್ತದ ಪಾವತಿಗೆ ಬ್ಯಾಂಕ್ ನ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಂತ್ರಸ್ತ ಗ್ರಾಹಕರು ದೂರು ನೀಡಿರುತ್ತಾರೆ.

ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಮಲ್ಪೆ ಶಾಖೆಯಲ್ಲಿ ರೂ. 20 ಸಾವಿರ ಸಾಲ ಪಡೆದ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತಲಾ ರೂ. 2 ಲಕ್ಷದಂತೆ ರೂ. 28.26 ಕೋಟಿ ಮೊತ್ತ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಈ ಸಾಲದಿಂದಾಗಿ ನಮಗೆ ಇತರ ಶೈಕ್ಷಣಿಕ ಸಾಲ, ಗೃಹ ಸಾಲ ಅಥವಾ ವ್ಯವಹಾರದ ಸಾಲಕ್ಕೆ ಬೇರೆ ಬ್ಯಾಂಕ್‌ಗಳಿಗೆ ಹೋದಾಗ ಮಹಾಲಕ್ಷ್ಮಿ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಇದರ ಮಲ್ಪೆ ಶಾಖೆಯಲ್ಲಿ ದಾಖಲಾಗಿರುವ ರೂ. 2.00 ಲಕ್ಷ ಸಾಲದಿಂದಾಗ ಸಾಲ ಪಡೆಯಲು ಸಿಬಿಲ್‌ ಸಮಸ್ಯೆಯಾಗುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮಹಾಲಕ್ಷ್ಮಿ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಇದರ ಮಲ್ಪೆ ಶಾಖೆಯಲ್ಲಿ ಪ್ರಸ್ತುತ ರೂ. 20 ಸಾವಿರ ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್‌ನವರು ರೂ. 2.00 ಲಕ್ಷ ಸಾಲ ಪಾವತಿಸಲು ಮನೆಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಗ್ರಾಹಕರು ತಮಗೆ ನ್ಯಾಯಕೊಡಿಸುವಂತೆ ಹಾಗೂ ಈ ಬಗ್ಗೆ ಸಂಬಂದಪಟ್ಟವರಿಂದ ಸೂಕ್ತ ತನಿಖೆ ನಡೆಸಿ ನಾವು ಪಡೆಯದ ಸಾಲದಿಂದ ನಮ್ಮನ್ನು ಮುಕ್ತರನ್ನಾಗಿಸುವಂತೆ ನನಗೆ ಮನವಿ ನೀಡಿರುತ್ತಾರೆ.

ಆದ್ದರಿಂದ ಸುಮಾರು 1413 ಮಂದಿಗೆ ತಲಾ ರೂ. 20 ಸಾವಿರದಂತೆ ಸಾಲ ನೀಡಿ ಬಳಿಕ ನಕಲಿ ದಾಖಲೆ ಸೃಷ್ಟಿಸಿ ಅದನ್ನು ರೂ. 2.00 ಲಕ್ಷ ಎಂದು ಒಟ್ಟು ರೂ. 28.26 ಕೋಟಿ ಬೇನಾಮಿ ಸಾಲದ ಅಕ್ರಮ ಎಸಗಿರುವುದು ಅತಿದೊಡ್ಡ ಹಗರಣವಾಗಿದೆ. ಈ ವಿಷಯದಲ್ಲಿ ಸರ್ಕಾರ ತಕ್ಷಣ ಮದ್ಯ ಪ್ರವೇಶಿಸಿ ಈ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಿ ರೂ. 20 ಸಾವಿರ ಸಾಲ ನೀಡಿರುವುದನ್ನು ರೂ. 2.00 ಲಕ್ಷ ಎಂದು ನಮೂದಾಗಿರುವ ವ್ಯಾತ್ಯಾಸದ ಮೊತ್ತ ಯಾರಿಗೆ ಸೇರಿದೆ ಎಂಬೂದನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಆ ಮೊತ್ತವನ್ನು ವಸೂಲು ಮಾಡಿ ಬ್ಯಾಂಕ್‌ನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತ ಗ್ರಾಹಕರನ್ನು ಸಾಲ ಮುಕ್ತರನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English