ವಕ್ಪ್ ಪ್ರೀತಿ ತೋರಿ,ರೈತರು ,ಜನರನ್ನು ಕಾಂಗ್ರೆಸ್ ಬೀದಿಗೆ ತಂದು‌ ನಿಲ್ಲಿಸಿದೆ : ಡಾ.ಭರತ್ ಶೆಟ್ಟಿ ವೈ ವಾಗ್ದಾಳಿ

9:38 PM, Thursday, October 31st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಾವೂರು: ಬ್ರಿಟೀಷರ ಕಾಲದಲ್ಲಿ ಆರಂಭವಾದ ವಕ್ಫ್ ಕಾಯಿದೆ ರದ್ದು ಮಾಡುವ ಬದಲು 1995ರ ವಕ್ಫ್‌ ಕಾಯಿದೆ ಮತ್ತು 2013 ರಲ್ಲಿ ಯುಪಿಎ ಸರ್ಕಾರ ಶಾಸನಾತ್ಮಕ ಅಧಿಕಾರ ನೀಡಿದ್ದರಿಂದ ಇಂದು ಜನರು,ರೈತರು ಬೀದಿಗೆ ಬೀಳುವಂತಾಗಿದೆ .ಲಕ್ಷ ಲಕ್ಷ ಎಕರೆ ಭೂಮಿಯನ್ನು ಲ್ಯಾಂಡ್ ಜಿಹಾದ್ ಮೂಲಕ ಕಬಳಿಸಲು ಕಾಂಗ್ರೆಸ್ ಕಾರಣ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ವಾಗ್ದಾಳಿ ನಡೆಸಿದ್ದಾರೆ.

ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ವಕ್ಫ್‌ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡುವ ಹೊಸ ಕಾಯಿದೆಯನ್ನು ಅಂಗೀಕರಿಸಿದ್ದು ಹೇಗೆ,ಜನರನ್ನು ಕತ್ತಲಲ್ಲಿ ಇಟ್ಟು ವಕ್ಫ್‌ ಆಸ್ತಿ ಎಂದು ಗುರುತಿಸುವ ಗಣನೀಯ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಲಾಯಿತು. 2013ರಲ್ಲಿ ಈ ಕಾಯಿದೆಯನ್ನು ಪರಿಷ್ಕಾರ ಮಾಡಿದ್ದೀರಿ.

ಈ ವಿಶೇಷ ಅಧಿಕಾರದಿಂದಾಗಿ ವಕ್ಫ್‌ ಯಾವುದಾದರೂ ಆಸ್ತಿಯನ್ನು ತನ್ನದು ಎಂದು ಅನ್ನಿಸಿದರೆ ಅಧಿಕೃತವಾಗಿ ವಕ್ಫ್‌ ಆಸ್ತಿ ಎಂದು ಘೋಷಿಸುವ ಅಧಿಕಾರ ನೀಡಿದ್ದೀರಿ.ಇದೇ ಕಾರಣದಿಂದ ಇಂದು ದೇಶದ ಮುಗ್ದ ರೈತರು,ಬಡ ಜನರು ಅತಂತ್ರರಾಗಿದ್ದಾರೆ.

ವಕ್ಫ್‌ ಮಂಡಳಿಗಳು ಭ್ರಷ್ಟಾಚಾರ, ಭೂ ಅತಿಕ್ರಮಣ, ನಿಧಿಯ ದುರ್ಬಳಕೆ, ಅಧಿಕಾರದ ದುರುಪಯೋಗ ಮತ್ತು ಹಗರಣಗಳಿಗೆ ಕುಖ್ಯಾತಿ ಪಡೆದು, ಇದೀಗ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದು ಇದನ್ನು ತಡೆಯಲು ಕೇಂದ್ರದ ಬಿಜೆಪಿ ಸರಕಾರ ತರುವ ಕಾಯಿದೆಯನ್ನು ಜನರು ಪಕ್ಷ ಬೇಧ ಮರೆತು ಬೆಂಬಲಿಸಬೇಕು.

ಕಾಂಗ್ರೆಸ್ ಪಕ್ಷವು ಮಾಡಿದ ತಪ್ಪಿಗೆ ದೇಶದ ಜನರ ಅದರಲ್ಲೂ ಬಡ ವರ್ಗದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English