‘ಮಠ’ ಸಿನಿಮಾ ನಿರ್ದೇಶಕ ಗುರು ಪ್ರಸಾದ್ ಶವ ಪತ್ತೆ, ಆತ್ಮಹತ್ಯೆ ಶಂಕೆ

2:23 PM, Sunday, November 3rd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ‘ಇನ್ಸ್ ಟ್ಯೂಟ್ ಆಪ್ ಸ್ಕ್ರಿಪ್ಟ್ ರೈಟಿಂಗ್ ಹಾಗು ಡೈರೆಕ್ಷನ್ ಸ್ಕೂಲ್ ಮಾಲಕ . ಜಿಯೋ ಸ್ವಾದ್ ಅನ್ನೋ ಶಾಲೆ ಸಹ ನಡೆಸುತ್ತಿದ್ದ ಕನ್ನಡದ ನಿರ್ದೇಶಕ ಗುರು ಪ್ರಸಾದ್ ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ.

ಇತ್ತೀಚಿಗೆ ಬಿಡುಗಡೆ ಕಂಡಿದ್ದ ‘ರಂಗನಾಯಕ’ ಸಿನಿಮಾ ತೀವ್ರ ಸೋಲು ಅನುಭವಿಸಿತ್ತು. ನಿರ್ದೇಶಕ ಗುರುಪ್ರಸಾದ್ ಮೇಲೆ ಕೋರ್ಟ್ ಕೇಸ್ ನಡೀತಾ ಇತ್ತು. ಶ್ರೀನಿವಾಸ್ ಗೌಡ ಅನ್ನೋರ ಜೊತೆ ಹಣದ ವ್ಯವಹಾರ ಇತ್ತು, ಗುರು ಪ್ರಸಾದ್ ಅವರಿಗೆ 25 ಲಕ್ಷ ಹಣ ಕೊಟ್ಟಿದ್ದರು ಶ್ರೀನಿವಾಸ್ ಗೌಡ. ಹಣ ವಾಪಸ್ ಕೊಡಲಾಗದೇ ಗುರುಪ್ರಸಾದ್ ಸಮಸ್ಯೆ ಮಾಡಿಕೊಂಡಿದ್ದರಂತೆ.

ಶ್ರೀನಿವಾಸ್ ಗೌಡ ಅವರ ಜೊತೆಗಿನ ಈ ಹಣದ ವ್ಯವಹಾರ ಕೋರ್ಟ್ ಮೆಟ್ಟಿಲೇರಿತ್ತು. ಕಳೆದ 24 ನೇ ತಾರೀಖು ಕೋರ್ಟ್ ವಿಚಾರಣೆ ಇತ್ತು. ಮೆಡಿಕಲ್ ರಿಪೋರ್ಟ್ ಕೊಟ್ಟು ಪ್ರಕರಣ ಮುಂದಕ್ಕೆ ಹಾಕಿಸಿಕೊಂಡಿದ್ರು ಗುರುಪ್ರಸಾದ್. ನಿನ್ನೆ ಗುರು ಪ್ರಸಾದ್ ಹುಟ್ಟುಹಬ್ಬ ಇತ್ತು. ವಿಶ್ ಮಾಡಲು ಯಾರೇ ಫೋನ್ ಕಾಲ್ ಮಾಡಿದರೂ ಗುರುಪ್ರಸಾದ್ ಪಿಕ್ ಮಾಡಿಲ್ಲ, ಆಗ ಹಲವರಿಗೆ ಶಾಕ್ ಆಗಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ.

ಜಗ್ಗೇಶ್ ಹಾಗೂ ಹಲವಾರು ಖ್ಯಾತ ಕಲಾವಿದರ ನಟನೆಯ ‘ಮಠ’ ಸಿನಿಮಾ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ ನಿಧನರಾಗಿದ್ದಾರೆ. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಕನ್ನಡ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಕೊನೆಯುಸಿರು ಎಳೆದಿದ್ದಾರೆ. ನಿರ್ದೇಶಕ ಗುರು ಪ್ರಸಾದ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಮೃತರಾಗಿ ಹತ್ತು ದಿನಗಳು ಆಗಿದ್ವಾದಿರಬಹುದು ಎನ್ನಲಾಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

2006 ರಲ್ಲಿ ‘ಮಠ’ ಸಿನಿಮಾ ಮೂಲಕ ನಿರ್ದೇಶಕ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ , ಎರಡನೇ ಸಲ ಸಿನಿಮಾಗಳನ್ನ ನಿರ್ದೇಶಿಸಿದ್ದರು. ‘ರಂಗನಾಯಕ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಅವರು ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.

ಬಿಗ್ ಬಾಸ್ ಸೇರಿದಂತೆ, ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್ ನಲ್ಲೂ ಮಿಂಚಿದ್ದ ಗುರು ಪ್ರಸಾದ್, ವಿವಾದಗಳಿಂದಲೂ ಆಗಾಗ ಹೆಸರುವಾಸಿಯಾಗಿದ್ದರು. ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅಂತಹ ಕಾರಣವೇನಿತ್ತು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English